ಕೂಡಿಗೆ, ಏ. ೨೯: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಕೇಂದ್ರದ ಸರ್ಕಲ್‌ನಲ್ಲಿ ಬೈಕ್ ಮತ್ತು ಪಿಕ್‌ಅಪ್ ನಡುವೆ ಡಿಕ್ಕಿಯಾದ ಪರಿಣಾಮವಾಗಿ ಬೈಕ್ ಸವಾರ, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಪೇದೆ ವಿವೇಕ್ ಅವರ ಎಡಕಾಲಿಗೆ ಗಾಯಗಳಾಗಿವೆ.

ವಿವೇಕ್ ಬೈಕ್‌ನಲ್ಲಿ (ಕೆಎ ೧೨-೮೩೨೧) ಕುಶಾಲನಗರ ಕಡೆಯಿಂದ ಕೂಡಿಗೆಗೆ ಬರುವಾಗ ಕೈಗಾರಿಕಾ ಕೇಂದ್ರದಿAದ ಕುಶಾಲನಗರಕ್ಕೆ ಹೋಗುವ ಪಿಕ್‌ಅಪ್ (ಕೆಎ ೧೨- ೮೨೩೫) ಡಿಕ್ಕಿಯಾದ ಪರಿಣಾಮ ವಿವೇಕ್‌ನ ಎಡಕಾಲಿಗೆ ಪೆಟ್ಟುಬಿದ್ದಿದೆ. ಪ್ರಥಮ ಚಿಕಿತ್ಸೆಯನ್ನು ಕುಶಾಲನಗರದ ಆರೋಗ್ಯ ಕೇಂದ್ರದಲ್ಲಿ ನೀಡಿ ನಂತರ ಮೈಸೂರು ಅಪೋಲೋ ಆಸ್ಪತ್ರೆಗೆ ಸಾಗಿಸಲಾಗಿದೆ. ಪಿಕ್‌ಅಪ್ ಚಾಲಕ ಕುಶಾಲನಗರದ ಅಮಿತ್ ಎಂಬಾತನ ವಿರುದ್ಧ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.