ಮಡಿಕೇರಿ, ಏ. ೨೯: ಮರೆನಾಡ್ ಕೊಡವ ಸಮಾಜದ ನೂತನ ಅಧ್ಯಕ್ಷರಾಗಿ ಕುಪ್ಪುಡೀರ ಪೊನ್ನು ಮುತ್ತಪ್ಪ ಅವರು ಆಯ್ಕೆಯಾಗಿದ್ದಾರೆ. ತಾ. ೨೭ ರಂದು ಸಮಾಜದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಮಿತಿಯ ಆಯ್ಕೆ ನಡೆಯಿತು.
ಕಾರ್ಯದರ್ಶಿಯಾಗಿ ಅಯ್ಯಮಾಡ ರಿನೇಶ್ ಮುತ್ತಣ್ಣ, ಉಪಾಧ್ಯಕ್ಷರುಗಳಾಗಿ ಕರ್ತಮಾಡ ಮಿಲನ್ ಮೇದಪ್ಪ, ಕುಪ್ಪಣಮಾಡ ಬೇಬಿ ಹಾಗೂ ಖಜಾಂಚಿಯಾಗಿ ಕಾಯಪಂಡ ಮಧು ಮೋಟಯ್ಯ, ಸಹಕಾರ್ಯದರ್ಶಿಯಾಗಿ ಬುಟ್ಟಿಯಂಡ ಸುನೀತ ಆಯ್ಕೆಗೊಂಡಿದ್ದಾರೆ. ಸಭೆಯಲ್ಲಿ ಹಾಲಿ ಅಧ್ಯಕ್ಷರಾಗಿದ್ದ ಮಲ್ಲೇಂಗಡ ಕೆ. ಪೆಮ್ಮಯ್ಯ, ಮುಲ್ಲೇಂಗಡ ಮುತ್ತಣ್ಣ ಮತ್ತಿತರರು ಪಾಲ್ಗೊಂಡಿದ್ದರು.