ಮಡಿಕೇರಿ, ಏ. ೨೯ : ಗ್ರೀನ್ ಸಿಟಿ ಫೋರಂ, ನಗರಸಭೆ ಹಾಗೂ ಇಳೆ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮೇ ೧ ರಂದು ಮಡಿಕೇರಿಯಲ್ಲಿ ಸೈಕ್ಲೋಥಾನ್ ಸೈಕಲ್ ಜಾಥಾ ಏರ್ಪಡಿಸಲಾಗಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಫೋರಂನ ಸ್ಥಾಪಕಾಧ್ಯಕ್ಷ ಚೆಯ್ಯಂಡ ಸತ್ಯ, ಅಂದು ಬೆಳಗ್ಗೆ ೭ ಗಂಟೆಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ ಸೈಕಲ್ ಜಾಥಾಕ್ಕೆ ಗಣ್ಯರಿಂದ ಚಾಲನೆ ದೊರೆಯಲಿದೆ ಎಂದು ತಿಳಿಸಿದ್ದಾರೆ.
ನಂತರ ಜಾಥಾ ಜನರಲ್ ತಿಮ್ಮಯ್ಯ ವೃತ್ತ, ರಾಜಾಸೀಟು, ವಿಜಯ ವಿನಾಯಕ ದೇವಾಲಯ, ಎಸ್ಬಿಐ ಮಾರ್ಗದ ಮೂಲಕ ನಗರದ ಹಳೆ ಖಾಸಗಿ ಬಸ್ ನಿಲ್ದಾಣ ತಲುಪಲಿದೆ. ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ಲಾಸ್ಟಿಕ್ ಮುಕ್ತ ಗುರಿಯತ್ತ ನಮ್ಮ ಕೆಲಸವನ್ನು ಪುನಶ್ಚೇತನಗೊಳಿಸಬೇಕಾಗಿದೆ. ಸಾರ್ವಜನಿಕರು ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಸಹಕರಿಸುವಂತೆ ಸತ್ಯ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ ೯೫೩೫೯ ೧೫೯೧೬, ೯೪೪೮೭ ೨೧೨೫೨ ಸಂಪರ್ಕಿಸಬಹುದಾಗಿದೆ.