ಮಡಿಕೇರಿ, ಏ. ೨೯; ದೂರದಿಂದ ಕಾಣುತ್ತಿದ್ದ ಬೆಟ್ಟ.., ಎಲ್ಲರೂ ವಾಹನಗಳಲ್ಲಿ ಝೊಂಯ್.., ಅಂತ ಹೋಗ್ತಾ ಇದ್ರೆ ಇತ್ತ ಬೆಟ್ಟದ ಕೆಳಗೆ ನಾಲ್ಕು ವರ್ಷದ ಪುಟಾಣಿಗಳಿಂದ ಹಿಡಿದು ಎಂಭತ್ತು ವರ್ಷದ ವೃದ್ಧರಾದಿಯಾಗಿ ಒಂದೆAಭತ್ತರಿAದ ತೊಂಭತ್ತು ಮಂದಿ ಬೆಟ್ಟದತ್ತ ದಿಟ್ಟಿಸುತ್ತಿದ್ದರು.., ನೋಡ ನೋಡುತ್ತಿದ್ದಂತೆಯೇ ತಿಂಡಿ ತಿಂದು, ಶಿಸ್ತಿನ ಸಿಪಾಯಿಗಳಂತೆ ಹೆಗಲ ಮೇಲೆ ಬ್ಯಾಗ್ ಹೇರಿಕೊಂಡು ಬೆಟ್ಟವನ್ನು ಏರಿಯೇಬಿಟ್ಟರು..! ಬೆಟ್ಟದ ಮೇಲೆಲ್ಲ ಓಡಾಡಿ., ಜಾರಿ ಬಿದ್ದು., ನಲಿದು., ಕಾಡಲ್ಲಿ ಸಿಕ್ಕ ಅಪರೂಪದ ಕಾಡು ಹಣ್ಣುಗಳ ಸವಿಯುಂಡು ನಲಿದರು., ಬೆಟ್ಟದ ಕೆಳಗಿನ ನದಿಯಲ್ಲಿ ಮಿಂದೆದ್ದು ಸಂಭ್ರಮಿಸಿದರು..!
ವಾAಡರ‍್ಸ್ ಕ್ಲಬ್ ವತಿಯಿಂದ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ದಿ. ಸಿ.ವಿ.ಶಂಕರ್ ಸ್ಮರಣಾರ್ಥ ನಡೆಯುತ್ತಿರುವ ಉಚಿತ ಬೇಸಿಗೆ ಶಿಬಿರದ ಶಿಬಿರಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಕೋಟೆ ಬೆಟ್ಟದ ಚಾರಣದಲ್ಲಿ
ಕಂಡು ಬಂದ ಚಿತ್ರಣ..! ಶಿಬಿರದಲ್ಲಿ ಭಾಗವಹಿಸುತ್ತಿರುವ ೮೦ ಮಂದಿ ಮಕ್ಕಳು ಸೇರಿದಂತೆ ಸಂಘಟಕರು, ತರಬೇತುದಾರರು, ಪೋಷಕರು ಚಾರಣದಲ್ಲಿ ಭಾಗವಹಿಸಿದ್ದರು. ಸುಮಾರು ೮ಕಿ.ಮೀ. ದೂರದ ಬೆಟ್ಟವನ್ನು ಏರಿಳಿದರು. ಕೆಲವು ಮಕ್ಕಳು ಬಸವಳಿದಂತೆ ಕಂಡುಬAದರಾದರೂ ನದಿ ನೀರು ಕಂಡಾಕ್ಷಣ ಅವರ ಸಂಭ್ರಮ ಮುಗಿಲು ಮುಟ್ಟಿತ್ತು..! ಹಾಡು ಹಾಡಿ ಎಲ್ಲರನ್ನು ರಂಜಿಸಿದರು..! ಪೋಷಕರೂ ಕೂಡ ಚಾರಣದ ಮಜಾ ಅನುಭವಿಸಿದರು. ಬೆಟ್ಟದ ತಪ್ಪಲಿನಲ್ಲಿಯೇ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಸಂಘಟಕರಾದ ಬಾಬು ಸೋಮಯ್ಯ, ತರಬೇತುದಾರರಾದ ಕೋಟೇರ ಮುದ್ದಯ್ಯ, ದೈಹಿಕ ಶಿಕ್ಷಣಾಧಿಕಾರಿ ಎಸ್.ಟಿ. ವೆಂಕಟೇಶ್, ಕುಡೆಕಲ್ ಸಂತೋಷ್, ಲೋಕೇಶ್, ಪೋಷಕರಾದ ಉಮೇಶ್, ಮಹೇಶ್, ಸೌಮ್ಯ ಇತರರು ಉಸ್ತುವಾರಿ ವಹಿಸಿಕೊಂಡಿದ್ದರು.
ಕ್ರೀಡೆಯಲ್ಲಿ ಉಲ್ಲಾಸ..!
ಶಿಬಿರದಲ್ಲಿ ಭಾಗವಹಿಸಿರುವ ಶಿಬಿರಾರ್ಥಿಗಳಿಗಾಗಿ ಇಂದು ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಹಿರಿಯ, ಕಿರಿಯ ಬಾಲಕ-ಬಾಲಕಿಯರಿಗಾಗಿ ಓಟದ ಸ್ಪರ್ಧೆ, ೪*೧೦೦ ರಿಲೇ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಪುಟಾಣಿಗಳಿಂದ ಹಿಡಿದು ಪ್ರತಿಯೋರ್ವರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಓಡಿ ಬಹುಮಾನ ಗೆದ್ದರು. ತಾ.೩೦ರಂದು(ಇAದು) ಶಿಬಿರಾರ್ಥಿಗಳ ನಡುವಿನ ತಂಡಗಳ ನಡುವೆ ಹಾಕಿ ಪಂದ್ಯಾವಳಿ ಏರ್ಪಡಿಸಲಾಗಿದೆ.