ಗುಡ್ಡೆಹೊಸೂರು, ಏ. ೨೮: ಕುಶಾಲನಗರದ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಇಲ್ಲಿನ ರಾಧಾಕೃಷ್ಣ ಬಡಾವಣೆಯ ದಿವ್ಯ ದರ್ಶನಭವನದಲ್ಲಿ ಒತ್ತಡ ಮುಕ್ತಿ ಮತ್ತು ರೋಗನಿರೋಧಕ ಶಕ್ತಿಗಾಗಿ ಧ್ಯಾನ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಒಂದು ವಾರಗಳ ಕಾಲ ನಡೆಯುವ ಶಿಬಿರವನ್ನು ಮೈಸೂರು ಕೇಂದ್ರದ ಬಿ.ಕೆ. ಪ್ರಾಣೇಶ್ ನಡೆಸುತ್ತಿದ್ದಾರೆ. ಬೆಳಿಗ್ಗೆ ೭ ರಿಂದ ೮.೩೦ ತನಕ ಮತ್ತು ಸಂಜೆ ೬.೩೦ ರಿಂದ ೮ ಗಂಟೆಯ ತನಕ ಪ್ರವಚನ ನಡೆಯುತ್ತಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಹೆಚ್ಚಿನ ಮಾಹಿತಿಗಾಗಿ ೮೪೩೧೦೮೩೬೭೪, ೯೮೮೦೨೮೩೭೫೩ ಸಂಪರ್ಕಿಸುವAತೆ ಕುಶಾಲನಗರದ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದವರು ಕೋರಿಕೊಂಡಿದ್ದಾರೆ.