ಸೋಮವಾರಪೇಟೆ, ಏ. ೨೮: ಇಲ್ಲಿಗೆ ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದ ಸಬ್ಬಮ್ಮ ದೇವರ ವಾರ್ಷಿಕ ಸುಗ್ಗಿ ಉತ್ಸವ ತಾ. ೨೯ ರಂದು (ಇಂದು) ನಡೆಯಲಿದೆ ಎಂದು ದೇವಸ್ಥಾನದ ಅಧ್ಯಕ್ಷ ಡಿ.ಎನ್. ರಾಜ್‌ಗೋಪಾಲ್ ತಿಳಿಸಿದ್ದಾರೆ.

ಸುಗ್ಗಿ ಹಿನ್ನೆಲೆ ಇಂದು ಬೆಳಿಗ್ಗೆ ಗಂಗಾಸ್ನಾನ ಹಾಗೂ ಮುಡಿ ಒಪ್ಪಿಸುವದು, ಬೀದಿ ರಾಜಾಂಗಣದಲ್ಲಿ ಮೆರವಣಿಗೆ ನಡೆಯಿತು. ತಾ. ೨೯ರಂದು ಬೆಳಿಗ್ಗೆ ಹಣ್ಣು ಕಾಯಿ ಹಾಗೂ ಮಡೆ ಉತ್ಸವ ನಡೆಯಲಿದೆ. ಇದೇ ಸಂದರ್ಭ ಗ್ರಾಮಸ್ಥರಿಂದ ಸುಗ್ಗಿ ಕುಣಿತ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.

ತೋಳೂರುಶೆಟ್ಟಳ್ಳಿ, ಚಿಕ್ಕತೋಳೂರು ಮತ್ತು ದೊಡ್ಡತೋಳೂರು ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.