ಮಡಿಕೇರಿ, ಏ. ೨೮: ಮಡಿಕೇರಿ ತಾಲೂಕು ಕಸಾಪ ವತಿಯಿಂದ ಮೂರ್ನಾಡು ಹೋಬಳಿ ಹಾಗೂ ನಾಪೋಕ್ಲು ಹೋಬಳಿ ಸಮಿತಿ ರಚನೆ ಸಲುವಾಗಿ ಸಭೆ ಆಯೋಜಿಸಲಾಗಿದೆ. ತಾ. ೨೯ ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ಮೂರ್ನಾಡು ಗ್ರಾ.ಪಂ. ಸಮುದಾಯ ಭವನ ಹಾಗೂ ಅಪರಾಹ್ನ ೩ ಗಂಟೆಗೆ ನಾಪೋಕ್ಲು ಪ್ರವಾಸಿ ಮಂದಿರದಲ್ಲಿ ಸಭೆ ನಡೆಯಲಿದೆ. ಜಿಲ್ಲಾಧ್ಯಕ್ಷ ಕೇಶವ ಕಾಮತ್, ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮತ್ತಿತರರು ಪಾಲ್ಗೊಳ್ಳಲಿರುವುದಾಗಿ ತಾಲೂಕು ಅಧ್ಯಕ್ಷ ಅಂಬೆಕಲ್ ನವೀನ್ ತಿಳಿಸಿದ್ದಾರೆ.