ಮಡಿಕೇರಿ, ಏ. ೨೮: ಚಿತ್ರದುರ್ಗದ ತ.ರಾ.ಸು. ರಂಗ ಮಂದಿರದಲ್ಲಿ ಕರುನಾಡ ಹಣತೆ ಬಳಗ ಹಾಗೂ ಸಾಂಸ್ಕೃತಿಕ ಕಲಾ ತಂಡ ಜಂಟಿ ಆಶ್ರಯದಲ್ಲಿ ನಡೆದ ಅಖಿಲ ಕರ್ನಾಟಕ ಪ್ರಥಮ ಮಹಿಳಾ ಸಮ್ಮೇಳನದಲ್ಲಿ ಮಡಿಕೇರಿ ತಾಲೂಕಿನ, ಭಾಗಮಂಡಲ ಹೋಬಳಿಯ, ತಣ್ಣಿಮಾನಿ ಗ್ರಾಮದ, ರಂಜಿತ್ ಕುದುಪಜೆ ಅವರಿಗೆ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೈದ್ಯಕೀಯ ಹಾಗೂ ಸಾಹಿತ್ಯ ಕೇತ್ರದಲ್ಲಿ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಸಂದರ್ಭದಲ್ಲಿ ಸಮ್ಮೇಳನ ಅಧ್ಯಕ್ಷ ಬೆಳಗಾವಿಯ ಹಿರಿಯ ಸಾಹಿತಿ ಜ್ಯೋತಿ ಬದಾಮಿ, ಅಂರ‍್ರಾಷ್ಟಿçÃಯ ಯೋಗ ಪಟು ಮಂಗಳಾ ಜಿ. ಶಿರಸಿ ಕರುನಾಡು ಹಣತೆ ಬಳಗದ ರಾಜ್ಯಾಧ್ಯಕ್ಷ ಎಸ್. ರಾಜು ಕವಿ ಸೂಲೇನಹಳ್ಳಿ, ಸಂಸ್ಥಾಪಕ ಕನಕ ಪ್ರೀತಿಶ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.