ಮಡಿಕೇರಿ, ಏ. ೨೮: ಸೋಮವಾರಪೇಟೆ ತಾಲೂಕು ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನೆ ಇವರ ವತಿಯಿಂದ ಮೇ ೪ ರಿಂದ ಮೇ ೧೧ ರವರೆಗೆ ಬೆಳಗ್ಗೆ ೯.೩೦ ಗಂಟೆಯಿAದ ಸಂಜೆ ೪ ಗಂಟೆಯವರೆಗೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಸ್ತಿçÃಶಕ್ತಿ ಭವನ ತಾಲೂಕು ಪಂಚಾಯಿತಿ ಆವರಣದಲ್ಲಿ ತಾಲೂಕಿನ ೫ ವರ್ಷದಿಂದ ೧೬ ವರ್ಷದೊಳಗಿನ ಮಕ್ಕಳಿಗೆ ತಾಲೂಕು ಮಟ್ಟದ ಬೇಸಿಗೆ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಚಿತ್ರಕಲೆ, ಸಮೂಹ ನೃತ್ಯ, ಯೋಗ, ಕರಾಟೆ ಮತ್ತು ಜೇಡಿಮಣ್ಣಿನ ಕಲೆ ಚಟುವಟಿಕೆಗಳನ್ನು ನಡೆಸಲಾಗುವುದು. ಆದ್ದರಿಂದ ಆಸಕ್ತರು ಹೆಸರು ನೋಂದಾಯಿಸಿಕೊಳ್ಳಲು ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಸೋಮವಾರಪೇಟೆ, ದೂರವಾಣಿ ಸಂಖ್ಯೆ: ೦೮೨೭೬-೨೮೨೨೮೧ ಇವರನ್ನು ಸಂಪರ್ಕಿಸಬಹುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಎಂ. ಅಣ್ಣಯ್ಯ ಅವರು ತಿಳಿಸಿದ್ದಾರೆ.