ಸುಂಟಿಕೊಪ್ಪ, ಏ.೨೮: ಐಗೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಯಾದವ್ ಅವರನ್ನು ಕರ್ತವ್ಯ ಲೋಪದ ಅನ್ವಯ ಜಿ.ಪಂ. ಸಿಇಓ ಅಮಾನತ್ತುಗೊಳಿಸಿದ್ದಾರೆ.
ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಿಗೆ ಆಡಳಿತ ಮಂಡಳಿಯವರಿಗೆ ಸಹಕಾರ ನೀಡದೆ ವಸತಿ ಯೋಜನೆಗಳು ಬಡವರಿಗೆ ಸಮರ್ಪಕವಾಗಿ ವಿತರಿಸಲಾಗದೆ ಇರುವುದು, ತಾ.ಪಂ. ಪ್ರಗತಿ ಪರಿಶೀಲನೆ ಸಭೆಗೆ ಗೈರಾಗುವುದು, ಆಡಳಿತ ಮಂಡಳಿಯವರಿಗೆ ಸರಕಾರಿ ಯೋಜನೆಗಳ ಅನುಷ್ಠಾನಕ್ಕೆ ಅಡ್ಡಿಪಡಿಸುವುದು, ಗ್ರಾ.ಪಂ.ಸಿಬ್ಬAದಿಗಳಿಗೆ ವಿನಾಃಕಾರಣ ಕಿರುಕುಳ ನೀಡುವುದು ಸೇರಿದಂತೆ ಗ್ರಾ.ಪಂ.ನ ಕಸವಿಲೇವಾರಿಯ ವಾಹನ ಸ್ವಚ್ಛ ವಾಹಿನಿಯನ್ನು ತಾನೇ ಚಾಲಿಸಿ ಅವಘಡಕ್ಕೀಡುಮಾಡಿರುವ ಗುರುತಾದ ಕರ್ತವ್ಯ ಲೋಪ ಎಸಗಿರುವುದನ್ನು ಮನಗಂಡು ಸೋಮವಾರಪೇಟೆ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ ಅವರು ಜಿ.ಪಂ. ಮುಖ್ಯನಿರ್ವಹಣಾಧಿಕಾರಿಗೆ ಭಂವರ್ ಸಿಂಗ್ ಮೀನಾ ಅವರಿಗೆ ವರದಿ ನೀಡಿದ್ದರ ಅನುಸಾರ ಜಿ.ಪಂ.ಸಿಇಓ ಭಂವರ್ ಸಿಂಗ್ ಮಿನಾ ಅವರು ಐಗೂರು ಗ್ರಾ.ಪಂ.ಪಿಡಿಓ ಯಾದವ್ ಅವರನ್ನು ತಾ.೧೯.೪.೨೦೨೨ ರಿಂದ ಅಮಾನತ್ತುಗೊಳಿಸಿದ್ದಾರೆ.
ಅಧಿಕಾರಿ ನೇಮಕ
ಐಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಬಾಲಕೃಷ್ಣ ರೈ ಅವರನ್ನು ನೇಮಿಸಲಾಗಿದೆ.
ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಆಗಿದ್ದ ಬಾಲಕೃಷ್ಣ ರೈ ಅವರನ್ನು ಐಗೂರಿಗೆ ವರ್ಗಾಯಿಸಲಾಗಿದೆ. ಬೆಟ್ಟದಳ್ಳಿ ಗ್ರಾ.ಪಂ.ಗೆ ಬದಲಿ ಪಿಡಿಓ ಬರುವವರೆಗೆ ಬಾಲಕೃಷ್ಣ ರೈ ಅವರಿಗೆ ಅಲ್ಲಿನ ಮೇಲುಸ್ತುವಾರಿಯನ್ನು ವಹಿಸಲಾಗಿದೆ ಎಂದು ತಾ.ಪಂ. ಇಓ ಜಯಣ್ಣ ತಿಳಿಸಿದ್ದಾರೆ.