ಬೆಸಗೂರು: ಡಾ. ಬಿ.ಆರ್. ಅಂಬೇಡ್ಕರ್ ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿದರೇ ಹೊರತು ಯಾವುದೇ ವರ್ಗದ ವಿರುದ್ಧವಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಪಿ. ಪುಟ್ಟರಾಜ್ ಅಭಿಪ್ರಾಯಪಟ್ಟರು.

ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಸೂರು ಗ್ರಾಮದಲ್ಲಿ ವಿಪ್ಲವ ಯುವ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಡಾ. ಅಂಬೇಡ್ಕರ್ ಜನ್ಮ ದಿನಾಚರಣೆ ಹಾಗೂ ರಥೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರು ಕ್ರೆöÊಸ್ತ ಕಾಲೇಜ್ ಪ್ರೊ. ಡಾ. ಶ್ರೀನಿವಾಸ್ ಮಾತನಾಡಿ, ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅರ್ಥ ಮಾಡಿಕೊಂಡರೆ ಭಾರತದ ಸರ್ವವನ್ನು ಅರ್ಥೈಸಿಕೊಂಡAತೆ ಆಗುತ್ತಿದೆ. ವಿದ್ಯಾರ್ಥಿಗಳಿಗೆ ವಿಚಾರಧಾರೆ ತಿಳಿಸುವ ಮೂಲಕ ಅವರನ್ನು ಸಹ ಪ್ರಬುದ್ಧರನ್ನಾಗಿ ಮಾಡಬಹುದು ಎಂದರು.

ಸಕಲೇಶಪುರ ವಕೀಲ ವೇಣು ಮಾತನಾಡಿ, ವಿಶ್ವವೇ ಭಾರತದತ್ತ ನೋಡುವಂತೆ ಸಂವಿಧಾನ ರಚಿಸಿದ ಮಹಾಚೇತನ ಅಂಬೇಡ್ಕರ್ ವಿವಿಧತೆಯಲ್ಲಿ ಏಕತೆಯನ್ನು ಸಾರಿದ ಪ್ರಜಾಪ್ರಭುತ್ವ ಶಿಲ್ಪಿಯೂ ಆಗಿದ್ದಾರೆ ಎಂದರು. ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಕೆ.ಕೆ. ಧರ್ಮಪ್ಪ, ಜಂಟಿ ಕೃಷಿ ನಿರ್ದೇಶಕ ಚಿಕ್ಕಮಗಳೂರು ತಿರುಮಲೇಶ್, ಪಿಡಿಓ ಹೂವಯ್ಯ, ಉಪ ವಲಯ ಅರಣ್ಯಾಧಿಕಾರಿ ಗೋವಿಂದ್ ರಾಜ್ ಹಾಗೂ ಕೆ.ಪಿ. ರಮೇಶ್ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೀರ್ತಿ ವಹಿಸಿದ್ದರು. ಸದಸ್ಯರಾದ ಕಿಶನ್, ಹರೀಶ್, ಗುರುವಪ್ಪ, ಶಿಕ್ಷಕರಾದ ಡಿ.ಪಿ. ಸತೀಶ್, ಕಿರಣ್‌ಕುಮಾರ್, ಕವಿತಾ, ಮಂಜುಳಾಮಣಿ, ವಕೀಲರಾದ ರಾಘವೇಂದ್ರ, ಶಂಕರ್ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಮೊದಲು ಅಂಬೇಡ್ಕರ್ ಭಾವಚಿತ್ರದ ಟ್ಯಾಬ್ಲೊವನ್ನೊಳಗೊಂಡ ರಥೋತ್ಸವ ಹಾಗೂ ವಾಹನಗಳ ಜಾಥಾ ಬೆಸೂರು ವೃತ್ತದಿಂದ ಆರಂಭವಾಗಿ ಚಿಕ್ಕಭಂಡಾರ, ನಿಲುವಾಗಿಲು, ಬಸವನಾರೆ, ಚಿಕ್ಕಾಕುಂದ, ಹ್ಯಾಂಡ್ ಪೋಸ್ಟ್ ಮೂಲಕ ಕೊಡ್ಲಿಪೇಟೆ ಪಟ್ಟಣದವರೆಗೂ ಸಾಗಿ ಜನಮನ ರಂಜಿಸಿತು.