ಸುಂಟಿಕೊಪ್ಪ, ಏ. ೨೭: ಕಳೆದ ಎರಡು ದಿನಗಳ ಹಿಂದೆ ೭೫ರ ಪ್ರಾಯದ ರಾಮು ಎಂಬ ವ್ಯಕ್ತಿ ಗೋಣಿಕೊಪ್ಪ ರಸ್ತೆಯ ತಿತಿಮತಿ ಸಮೀಪ ನಂದನವನ ಎಸ್ಟೇಟಿನ ಮುಂಭಾಗದಲ್ಲಿ ಆಯತಪ್ಪಿ ಬಿದ್ದಿದ್ದ ವ್ಯಕ್ತಿಯನ್ನು ರಕ್ಷಿಸಿ, ೭ನೇ ಹೊಸಕೋಟೆ ತೊಂಡೂರಿನ ವಿಕಾಸ್ ಜನಸೇವಾ ಟ್ರಸ್ಟ್ ಆಶ್ರಯ ನೀಡಿದೆ. ದೇವರಪುರ ಪಂಚಾಯಿತಿ ಅಧ್ಯಕ್ಷೆ ಶಾರದ ಅವರು ಸುಂಟಿಕೊಪ್ಪ ಸಮೀಪದ ಜೀವನದಾರಿ ಆಶ್ರಮದ ಅಧ್ಯಕ್ಷ ರಮೇಶ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ ಹಿನ್ನೆಲೆ ಕೂಡಲೇ ಎಚ್ಚೆತ್ತುಕೊಂಡ ರಮೇಶ ಅವರು ಸ್ಥಳೀಯ ಪೋಲೀಸ್ ಠಾಣೆಗೆ ಹಾಗೂ ಪಂಚಾಯಿತಿಗೆ ಮಾಹಿತಿ ನೀಡಿ ನಂತರ ವಯೋವೃದ್ಧನ್ನು ರಕ್ಷಿಸಿ ವಿಕಾಸ್ ಜನಸೇವಾ ಟ್ರಸ್ಟಿನ ಜೀವನದಾರಿ ಆಶ್ರಮದಲ್ಲಿ ಆಶ್ರಯ ಕಲ್ಪಿಸಿದ್ದಾರೆ. ಈ ವ್ಯಕ್ತಿಯ ಊರು ಸಿದ್ದಾಪುರ ಎಂದು ತಿಳಿದು ಬಂದಿದ್ದು, ಇವರ ಸಂಬAಧಿಕರು ಹೆಚ್ಚಿನ ಮಾಹಿತಿಗಾಗಿ ವಿಕಾಸ್ ಜನಸೇವಾ ಟ್ರಸ್ಟ್ ಅನ್ನು ಸಂಪರ್ಕಿಸುವAತೆ ಕೋರಿದ್ದಾರೆ.