ಗೋಣಿಕೊಪ್ಪಲು, ಏ.೨೭: ದ.ಕೊಡಗಿನ ಬಿರುನಾಣಿ ಸಮೀಪದಲ್ಲಿ ಹುಲಿ ದಾಳಿ ನಡೆಸಿ ಗ್ರಾಮದ ಕೆ.ದರ್ಶನ್ ರವರಿಗೆ ಸೇರಿದ ಹಸು ಬಲಿ ತೆಗೆದುಕೊಂಡಿದೆ.

ಬುಧವಾರ ಮುಂಜಾನೆಯ ವೇಳೆ ಈ ಘಟನೆ ನಡೆದಿದೆ. ಮನೆಯ ಸಮೀಪದಲ್ಲಿ ಕಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದೆ. ಮಾಹಿತಿ ತಿಳಿದ ಶ್ರೀಮಂಗಲ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳಾದ ವೀರೇಂದ್ರ ಮರಿ ಬಸವಣ್ಣನವರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಸರ್ಕಾರದ ವತಿಯಿಂದ ಸಿಗುವ ಪರಿಹಾರವನ್ನು ಆದಷ್ಟು ಬೇಗ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ.

ಸಮೀಪದ ಅರಣ್ಯದ ಅಂಚಿನಿAದ ಹುಲಿಯು ಪಟ್ಟಣದಲ್ಲಿ ವಾಸ ಮಾಡುವ ಪ್ರದೇಶದತ್ತ ಮುಖ ಮಾಡಿದ್ದು ಈ ಭಾಗದ ಜನರು ಸಹಜವಾಗಿಯೇ ಆತಂಕಕ್ಕೆ ಒಳಗಾಗಿದ್ದಾರೆ.