ಮಡಿಕೇರಿ, ಏ. ೨೮: ಜಿಲ್ಲಾ ಕೇಂದ್ರ ಮಡಿಕೇರಿ ನಗರ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಇಲ್ಲಿನ ಪ್ರವಾಸಿ ತಾಣಗಳ ಸೊಬಗನ್ನು ಸವಿಯಲು ಪ್ರವಾಸಿಗರ ದಂಡೇ ಇಲ್ಲಿಗೆ ಹರಿದು ಬರುತ್ತದೆ. ಇಂತಹ ಸಂದರ್ಭದಲ್ಲಿ ನಗರ ವ್ಯಾಪ್ತಿಯಲ್ಲಿ ಪ್ರವಾಸಿಗರ ವಾಹನಗಳು ಸೇರಿದಂತೆ ಸ್ಥಳೀಯ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳಾವಕಾಶದ ಕೊರತೆಯಿಂದ ಸಮಸ್ಯೆ ಉಂಟಾಗುವುದು ಸರ್ವೆ ಸಾಮಾನ್ಯವೆನಿಸಿದೆ.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಗರಸಭೆ ನೂತನ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದು ಚತುಷ್ಚಕ್ರ ವಾಹನಗಳ ಪಾರ್ಕಿಂಗ್ಗಾಗಿ ಬಹು ಅಂತಸ್ತಿನ
ಪಾರ್ಕಿಂಗ್ ಕಟ್ಟಡವನ್ನು ನಿರ್ಮಿಸಲು ಚಿಂತನೆ ನಡೆಸ ಲಾಗಿದೆ
ಎಂದು ನಗರ ಸಭಾ ಅಧ್ಯಕ್ಷೆ ಅನಿತಾ
ಪೂವಯ್ಯ
ತಿಳಿಸಿದ್ದಾರೆ.
‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ನಗರಸಭೆಯಲ್ಲಿ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು ತಾ. ೨೯ (ಇಂದಿಗೆ) ೬ ತಿಂಗಳಾಗಿದೆ. ಬಹು ಅಂತಸ್ತಿನ ಪಾರ್ಕಿಂಗ್ ಕಟ್ಟಡ ನಿರ್ಮಾಣಕ್ಕೆ ನಗರೋತ್ಹಾನ ಯೋಜನೆಯಡಿ ೪ಕೋಟಿ ಹಣವನ್ನು ಮೀಸಲಿಡಲಾಗಿದೆ. ಕಟ್ಟಡ ನಿರ್ಮಾಣಕ್ಕೆ
(ಮೊದಲ ಪುಟದಿಂದ) ಬೇಕಾದ ಜಾಗವನ್ನು ಗುರುತು ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ. ಕಟ್ಟಡವನ್ನು ನಿರ್ಮಾಣ ಮಾಡಿದ ಬಳಿಕ ಅದರ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ವಹಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಆದಷ್ಟು ಶೀಘ್ರ ಈ ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ಅವರು ಹೇಳಿದರು.
ಒಂದು ಕಾಲದಲ್ಲಿ ಕಲಾವಿದರ ಹಾಗೂ ಕಲಾಭಿಮಾನಿಗಳ ಅಚ್ಚುಮೆಚ್ಚಿನ ಕಲಾ ಕೇಂದ್ರವಾಗಿದ್ದ ಕಾವೇರಿ ಕಲಾಕ್ಷೇತ್ರ ಪ್ರಸ್ತುತ ಶಿಥಿಲಾವಸ್ಥೆಯಲ್ಲಿದ್ದು ಯಾವುದೇ ಕಾರ್ಯಕ್ರಮಗಳಿಗೂ ಉಪಯೋಗವಾಗದ ಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ಕಲಾಕ್ಷೇತ್ರ ಕಟ್ಟಡವನ್ನು ಕೆಡವಿ ರೂ. ೫ ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಲಾಕ್ಷೇತ್ರವನ್ನು ನಿರ್ಮಿಸುವ ಯೋಜನೆಯನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಅನಿತಾ ಪೂವಯ್ಯ ತಿಳಿಸಿದ್ದಾರೆ.
ನಗರದ ಸ್ಟೋನ್ ಹಿಲ್ ಬಳಿಯ ಕಸ ಶೇಖರಣಾ ಸ್ಥಳದಿಂದಾಗಿ ಸುಬ್ರಮಣ್ಯ ನಗರ ಸೇರಿದಂತೆ ಅನೇಕ ವಾರ್ಡ್ಗಳಿಗೆ ಸಮಸ್ಯೆ ಆಗಿದ್ದು, ಅದನ್ನು ಸ್ಥಳಾಂತರಿಸುವ ಸಂಬAಧ ಶಾಸಕರು ಮತ್ತು ಜಿಲ್ಲಾಧಿಕಾರಿ ಬಳಿ ಚರ್ಚಿಸಿ ಮಡಿಕೇರಿ ನಗರದಿಂದ ಹೊರ ಭಾಗದಲ್ಲಿರುವ ಮೊಣ್ಣಂಗೇರಿ ಬಳಿ ಸುಮಾರು ೧೦ ಎಕರೆ ಜಾಗವನ್ನು
ನಗರ ಸಭೆಗೆ ಪಡೆಯಲಾಗಿದ್ದು, ಮುಂದಿನ ದಿನಗಳಲ್ಲಿ ಈ ಸಮಸ್ಯೆ ಬಹುತೇಕ ಪರಿಹಾರ ಕಾಣಲಿದೆ.
ಈಗಾಗಲೇ ನಗರದ ಎಲ್ಲಾ ಕಡೆ ಎಲ್ಈಡಿ ಲೈಟ್ಗಳ ವ್ಯವಸ್ಥೆ ಮಾಡಲು ಮುಂದಾಗಿದ್ದು ಮುಂದಿನ ದಿನಗಳಲ್ಲಿ ಮಡಿಕೇರಿ ನಗರವನ್ನು ಟ್ಯೂಬ್ ಲೈಟ್ ಮುಕ್ತ ನಗರವಾಗಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.
ಈಗಾಗಲೇ ನೀರಿಗೆ ಸಮಸ್ಯೆ
ಆಗದಂತೆ ಕ್ರಮ ವಹಿಸಲಾಗಿದ್ದು ಅಗತ್ಯವಿದ್ದ ಕಡೆ ಬೋರ್ವೆಲ್ಗೆ ಮೋಟಾರ್ ಅಳವಡಿಸುವ ಕಾರ್ಯದೊಂದಿಗೆ ಹಲವು ಬಾರಿ ಕುಂಡಾ ಮೇಸ್ತಿç, ಕೂಟು ಹೊಳೆಗೆ ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಲಾಗಿದೆ. ನಗರಸಭೆ ನಡಿಗೆ ವಾರ್ಡ್ ಕಡೆಗೆ ಕಾರ್ಯಕ್ರಮದಡಿ ವಾರ್ಡ್ಗಳಲ್ಲಿನ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡಲಾಗಿದೆ ಎಂದು ಅನಿತಾ ಪೂವಯ್ಯ ವಿವರಿಸಿದರು.