ಮಡಿಕೇರಿ ಏ.೨೭ : ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಜಿಲ್ಲಾ ಪ್ರಮುಖರ ಸಭೆ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು. ಕೂಟದ ಜಿಲ್ಲಾಧ್ಯಕ್ಷ ಬಿ.ಬಿ.ಐತ್ತಪ್ಪ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘಟನೆ ಮತ್ತು ವಿವಿಧ ಕಾರ್ಯಯೋಜನೆಯ ಕುರಿತು ಚರ್ಚಿಸಲಾಯಿತು.

ಜಿಲ್ಲೆಯಲ್ಲಿ ತುಳು ಭಾಷಿಕರು ಕಡ್ಡಾಯವಾಗಿ ಸದಸ್ಯತ್ವ ಪಡೆದುಕೊಳ್ಳುವಂತೆ ಪ್ರೇರೇಪಿಸುವುದು, ತುಳು ಸಂಘಟನೆಗಳನ್ನು ಪ್ರತಿ ಗ್ರಾಮ, ಹೋಬಳಿ ಮಟ್ಟದಲ್ಲಿ ಸಂಘಟಿಸುವುದು, ತುಳುವಿಗೆ ಸಂಬAಧಪಟ್ಟ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

ಕೂಟದ ಸ್ಥಾಪಕಾಧ್ಯಕ್ಷ ಶೇಖರ್ ಭಂಡಾರಿ, ಜಿಲ್ಲಾ ಉಪಾಧ್ಯಕ್ಷ ಬಿ.ವೈ.ಆನಂದರಘು, ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ, ಖಜಾಂಚಿ ಪ್ರಭು ರೈ, ಸಲಹೆಗಾರ ಶ್ರೀಧರ್ ನೆಲ್ಲಿತ್ತಾಯ, ಸ್ಥಾಪಕ ಸಲಹೆಗಾರ ಕೆ.ಆರ್.ಬಾಲಕೃಷ್ಣ ರೈ, ಗೌರವ ಸಲಹೆಗಾರ ಹರೀಶ್ ಆಳ್ವ, ಮಡಿಕೇರಿ ತಾಲೂಕು ಅಧ್ಯಕ್ಷ ಸುರೇಶ್ ಕುಲಾಲ್, ಜಿಲ್ಲಾ ಕಾರ್ಯದರ್ಶಿ ಆನಂದ್, ಉಪಾಧ್ಯಕ್ಷೆ ವಿಜಯಲಕ್ಷಿö್ಮ ರವಿ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ರಾಜೀವ್ ಲೋಚನ, ನಿರ್ದೇಶಕರುಗಳಾದÀ ಲೀಲಾ ಶೇಷಮ್ಮ, ಸಂಧ್ಯಾ ಗಣೇಶ್ ರೈ, ಗಿರೀಶ್ ರೈ, ಬಿ.ಎಸ್.ಪುರುಷೋತ್ತಮ, ಸುಜಾತ ಚಂದ್ರಶೇಖರ್, ಅಶೋಕ ಆಚಾರ್ಯ, ನಾಗರಾಜ್ ಸಭೆಯಲ್ಲಿ ಉಪಸ್ಥಿತರಿದ್ದರು.