ಮಡಿಕೇರಿ, ಏ೨೭ : ನಮ್ಮ ಮನಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಎಕಾಗ್ರತೆ ಅಗತ್ಯ. ಯೋಗದಿಂದ ಇದು ಸಾಧ್ಯ; ಗುರಿ ಸಾಧನೆಯಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮಡಿಕೇರಿಯ ಶ್ರಿರಾಂ ಸಿಟಿ ಯೂನಿಯನ್ ಫೈನಾನ್ಸ್ನ ಸೀನಿಯರ್ ಎಕ್ಸಿಕ್ಯೂಟಿವ್ ಜಾಯ್ಸ್ ವಿನ್ಸೆಂಟ್ ಅಭಿಪ್ರಾಯಪಟ್ಟರು.

ವಾಂಡರ‍್ಸ್ ಕ್ಲಬ್ ವತಿಯಿಂದ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ದಿ. ಸಿ.ವಿ.ಶಂಕರ್ ಸ್ಮರಣಾರ್ಥ ಏರ್ಪಡಿಸಿರುವ ಉಚಿತ ಬೇಸಿಗೆ ಶಿಬಿರದಲ್ಲಿ ಸಂಪನ್ಮೂ¯ ವ್ಯಕ್ತಿಯಾಗಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ಹಿತವಚನ ನುಡಿದರು. ಯಾವದೇ ಕಾರ್ಯಗಳನ್ನು ಮಾಡುವ ಮೊದಲು ಅದರ ಅರ್ಥ ತಿಳಿದುಕೊಳ್ಳಬೇಕು. ಯೋಗಕ್ಕೆ ಮೂರು ಶಕ್ತಿಯಿದೆ. ಜ್ಞಾಪಕ ಶಕ್ತಿ, ಭಕ್ತಿ ಶಕ್ತಿ ಹಾಗೂ ಕರ್ಮ ಎಂಬ ಮೂರು ಶಕ್ತಿಗಳನ್ನು ಹೊಂದಿದೆ. ಈ ಮೂರನ್ನು ಒಂದುಗೂಡಿಸಿ ಮನಸನ್ನು ಏಕಾಗೃತಗೊಳಿಸುವದೇ ಯೋಗವೆಂದು ಹೇಳಿದರು. ಪ್ರತಿದಿನ ಬೆಳಿಗ್ಗೆ ಯೋಗ ಮಾಡುವದರಿಂದ ದಿನವಿಡೀ ಕ್ರಿಯಾಶಿಲರಾಗಿರಬಹುದು. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಯೋಗ ಕೂಡ ಸಹಾಯ ಮಾಡುತ್ತದೆ. ಜೀವನದಲ್ಲಿ ಗುರಿ ಸಾಧನೆ ಮಾಡಲು ಯೋಗ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕಿವಿ ಮಾತು ಹೇಳಿದರು.

ಇದಕ್ಕೂ ಮುನ್ನಾದಿನ ಶಿಬಿರದಲ್ಲಿ ಭಾಗವಹಿಸಿದ್ದ, ಶಿಬಿರದಲ್ಲಿ ಕಲಿತು, ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆಯಾಗಿ ಇದೀಗ ಮೈಸೂರು ವಸತಿ ನಿಲಯದಲ್ಲಿರುವ, ರಾಷ್ಟಿçÃಯ ಹಾಕಿ ಪಂದ್ಯಾವಳಿಯಲ್ಲಿ ಪ್ರತಿನಿಧಿಸಿರುವ ಚೇನಂಡ ರಕ್ಷಾ ಮುತ್ತಮ್ಮ ತಾನು ಶಿಬಿರಕ್ಕೆ ಸೇರಿದ ಬಳಿಕ ಸ್ಟಿಕ್ ಹಿಡಿಯುವದನ್ನು ಕಲಿತಿದ್ದಾಗಿ ಹೇಳಿದಳಲ್ಲದೆ, ಕಠಿಣ ಶ್ರಮವಹಿಸಿ ಕಲಿಯುವಂತೆ ಶಿಬಿರಾರ್ಥಿಗಳಿಗೆ ಶುಭ ಕೋರಿ, ಕೆಲ ಕಾಲ ತರಬೇತಿ ನೀಡಿದಳು. ಈ ಸಂದರ್ಭ ವಾಂಡರ‍್ಸ್ ಕಾರ್ಯದರ್ಶಿ ಬಾಬು ಸೋಮಯ್ಯ, ತರಬೇತುದಾರರಾದ ಕೋಟೇರ ಮುದ್ದಯ್ಯ, ಗಣೇಶ್, ಶಾಂ ಪೂಣಚ್ಚ, ಕುಡೆಕಲ್ ಸಂತೋಷ್, ದೈಹಿಕ ಶಿಕ್ಷಣಾಧಿಕಾರಿ ಹಾಗೂ ಯೋಗ ಶಿಕ್ಷಕ ಎಸ್.ಟಿ.ವೆಂಕಟೇಶ್ ಇದ್ದರು. ಶಿಬಿರದಲ್ಲಿ ಪ್ರತಿನಿತ್ಯ ೮೦ಕ್ಕೂ ಅಧಿಕ ಶಿಬಿರಾರ್ಥಿಗಳು ಭಾಗವಹಿಸುತ್ತಿದ್ದಾರೆ.