ಕೆಲವು ರಾಜ್ಯಗಳು ಇಂಧನ ಮೇಲಿನ ವ್ಯಾಟ್ ಕಡಿಮೆ ಮಾಡಿಲ್ಲ : ಮೋದಿ ಬೇಸರ
ನವದೆಹಲಿ, ಏ. ೨೭: ಕಳೆದ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದರೂ ಕೆಲವು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಿಲ್ಲ ಮತ್ತು ಜನರಿಗೆ ಅನ್ಯಾಯ ಮಾಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ. ದೇಶದಲ್ಲಿ ಉದಯೋನ್ಮುಖ ಕೋವಿಡ್-೧೯ ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿಗಳೊAದಿಗಿನ ಸಂವಾದದಲ್ಲಿ ಮಾತನಾಡಿದ ಮೋದಿ, ಜಾಗತಿಕ ಪರಿಸ್ಥಿತಿಯಿಂದಾಗಿ ಜನರು ಎದುರಿಸುತ್ತಿರುವ ಸವಾಲುಗಳ ಪ್ರತ್ಯೇಕ ವಿಷಯವನ್ನು ಚರ್ಚೆ ಮಾಡಲು ಬಯಸುವುದಾಗಿ ಹೇಳಿದರು. ಯುದ್ಧದ ಪರಿಸ್ಥಿತಿಯು ಉದ್ಭವಿಸಿದೆ, ಪೂರೈಕೆ ಸರಪಳಿಯ ಮೇಲೆ ಪರಿಣಾಮ ಬೀರಿದೆ ಮತ್ತು ಅಂತಹ ವಾತಾವರಣದಲ್ಲಿ, ಸವಾಲುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಜಾಗತಿಕ ಬಿಕ್ಕಟ್ಟು ಅನೇಕ ಸವಾಲುಗಳನ್ನು ತರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಹಕಾರ ಫೆಡರಲಿಸಂ ಮತ್ತು ಸಮನ್ವಯದ ಮನೋಭಾವವನ್ನು ಇನ್ನಷ್ಟು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ವಿಚಾರವಾಗಿ ಬಿಜೆಪಿಯೇತರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಕಳೆದ ನವೆಂಬರ್‌ನಲ್ಲಿ ಜನರ ಮೇಲಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಕಡಿಮೆ ಮಾಡಿದೆ. ಅಂತೆಯೇ ಹಲವು ರಾಜ್ಯ ಸರ್ಕಾರಗಳು ತೆರಿಗೆಯನ್ನು ಕಡಿಮೆ ಮಾಡಿ ಅದರ ಲಾಭವನ್ನು ನಾಗರಿಕರಿಗೆ ವರ್ಗಾಯಿಸಿದೆ. ಆದರೆ ಇನ್ನೂ ಕೆಲ ರಾಜ್ಯಗಳು ಮಾತ್ರ ಆ ಕೆಲಸ ಮಾಡಿಲ್ಲ. ರಾಜ್ಯ ಸರ್ಕಾರಗಳು ವ್ಯಾಟ್ ಕಡಿತಗೊಳಿಸಿ ಅದರ ಲಾಭವನ್ನು ನಾಗರಿಕರಿಗೆ ವರ್ಗಾಯಿಸುವಂತೆ ಮೋದಿ ಒತ್ತಾಯಿಸಿದರು. ಕೆಲವು ರಾಜ್ಯಗಳು ತೆರಿಗೆಯನ್ನು ಕಡಿಮೆ ಮಾಡಿದೆ. ಆದರೆ ಕೆಲವು ರಾಜ್ಯಗಳು ಜನರಿಗೆ ಇದರ ಯಾವುದೇ ಪ್ರಯೋಜನವನ್ನು ನೀಡಲಿಲ್ಲ. ಇದರಿಂದಾಗಿ ಈ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗುತ್ತಲೇ ಇವೆ. ಇದು ಒಂದು ರೀತಿಯಲ್ಲಿ, ಇದು ಜನರಿಗೆ ಅನ್ಯಾಯವಲ್ಲವೇ?. ಇದು ನೆರೆಯ ರಾಜ್ಯಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.
ಅಕ್ರಮ ನೇಮಕಾತಿ ಪ್ರಕರಣ : ಅಮೃತ್ ಪೌಲ್ ವರ್ಗಾವಣೆ
ಬೆಂಗಳೂರು, ಏ. ೨೭: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬAಧಿಸಿದAತೆ ರಾಜ್ಯ ಸರ್ಕಾರ ನೇಮಕಾತಿ ವಿಭಾಗದ ಎಜಿಡಿಪಿ ಅಮೃತ್ ಪೌಲ್‌ರನ್ನು ವರ್ಗಾವಣೆ ಮಾಡಿದೆ. ೧೯೯೫ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಅಮೃತ್ ಪೌಲ್ ಅವರನ್ನು ನೇಮಕಾತಿ ವಿಭಾಗದಿಂದ ಆಂತರಿಕ ಭದ್ರತಾ ದಳದ ಎಡಿಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ಇನ್ನು ನೇಮಕಾತಿ ವಿಭಾಗದ ನೂತನ ಎಡಿಜಿಪಿ ಆಗಿ ಆರ್ ಹಿತೇಂದ್ರ ಅವರನ್ನು ವರ್ಗಾವಣೆ ಮಾಡಲಾಗಿದ್ದು ಹಿತೇಂದ್ರ ಅವರಿಗೆ ಹೆಚ್ಚುವರಿ ಹೊಣೆ ನೀಡಲಾಗಿದೆ. ಅಕ್ರಮ ನೇಮಕಾತಿ ಹಗರಣದಲ್ಲಿ ಅಮೃತ್ ಪೌಲ್ ಅವರು ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಕಾಂಗ್ರೆಸ್ ಆರೋಪದ ಹಿನ್ನೆಲೆಯಲ್ಲಿ ಅಮೃತ್ ಪೌಲ್‌ರನ್ನು ವರ್ಗಾವಣೆ ಮಾಡಲಾಗಿದೆ. ೫೪೫ ಹುದ್ದೆಗಳಿಗೆ ನೇಮಕಾತಿ ಅಕ್ರಮಕ್ಕೆ ಸಂಬAಧಿಸಿದAತೆ ಪೊಲೀಸರು ಮಹಾರಾಷ್ಟçದ ಪುಣೆ ಹೊರವಲಯದಲ್ಲಿ ಅಡಗಿದ್ದ ಮತ್ತೋರ್ವ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಎಂಬಾತನನ್ನು ಬಂಧಿಸಿದ್ದಾರೆ.
ಮುದ್ರಣ ಪೇಪರ್‌ಗೆ ಜಿಎಸ್‌ಟಿ ವಿನಾಯಿತಿ ನೀಡಿ : ಸಿದ್ದರಾಮಯ್ಯ
ಬೆಂಗಳೂರು, ಏ. ೨೭: ಹಲವು ನಿಯಂತ್ರಕ ನೀತಿಗಳು ವಹಿವಾಟು ಮತ್ತು ಹಣಕಾಸಿನ ಮೇಲೆ ಪರಿಣಾಮ ಬೀರಿದ್ದು, ಪತ್ರಿಕೆಗಳ ಮುದ್ರಣ ಕಾಗದಕ್ಕೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯಿಂದ ವಿನಾಯಿತಿ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಸಂಬAಧ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಮುದ್ರಣ ಕಾಗದದ ಮೇಲಿನ ಜಿಎಸ್‌ಟಿಯನ್ನು ತೆಗೆದುಹಾಕಬೇಕು. ಭಾರತೀಯ ಪತ್ರಿಕೆಗಳ ರಿಜಿಸ್ಟಾçರ್ (ಆರ್‌ಎನ್‌ಐ) ನೋಂದಾಯಿತ ಮತ್ತು ನೋಂದಾಯಿತ ಪತ್ರಿಕೆಗಳ ಹಿತದೃಷ್ಟಿಯಿಂದ ಮುದ್ರಣ ಕಾಗದದ ಮೇಲಿನ ಜಿಎಸ್‌ಟಿ ಹೊರೆಯನ್ನು ತಗ್ಗಿಸಬೇಕು ಎಂದು ಆಗ್ರಹಿಸಿದ್ದಾರೆ. ಸಿದ್ದರಾಮಯ್ಯ ಅವರ ಪ್ರಕಾರ, ಜಿಎಸ್‌ಟಿ ಜಾರಿಗೂ ಮುನ್ನ ಆರ್‌ಎನ್‌ಐ ನೋಂದಾಯಿತ ಪತ್ರಿಕೆಗಳ ಪ್ರಿಟಿಂಗ್ ಪೇಪರ್ ಮೇಲಿನ ತೆರಿಗೆ ಶೇ.೩ ರಷ್ಟಿತ್ತು ಮತ್ತು ಜಿಎಸ್‌ಟಿ ವ್ಯವಸ್ಥೆಯಡಿ ಅದನ್ನು ಶೇ.೫ಕ್ಕೆ ಹೆಚ್ಚಿಸಲಾಗಿದೆ. ಒಟ್ಟಾರೆ ಮುದ್ರಣ ಕಾಗದದ ಮೇಲಿನ ತೆರಿಗೆಯಲ್ಲಿ ಶೇ.೬೮ರಷ್ಟು ಹೆಚ್ಚಳವಾಗಿದೆ ಎಂದಿದ್ದಾರೆ. ಕೊರೊನಾಗಿಂತ ಮೊದಲು ಪ್ರತಿ ಟನ್ ಕಾಗದದ ಬೆಲೆ ೨೩,೦೦೦ ಇತ್ತು. ಈಗ ಅದು ೫೫ ರಿಂದ ೬೦,೦೦೦ ಕ್ಕೆ ಏರಿಕೆ ಆಗಿದೆ. ಸರಾಸರಿ ಶೇ. ೫೬ ರಷ್ಟು ಆಮದು, ಶೇ ೪೪ ರಷ್ಟು ದೇಶೀಯ ಮುದ್ರಣ ಕಾಗದದ ದರ ಹೆಚ್ಚಿರುವುದು ಮುದ್ರಣ ಮಾಧ್ಯಮಕ್ಕೆ ದುಬಾರಿಯಾಗಿದ್ದು, ತೀವ್ರ ನಷ್ಟಕ್ಕೆ ಸಿಲುಕಿವೆ. ಈ ಕ್ಷೇತ್ರದ ರಕ್ಷಣೆ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಹೇಳಿದ್ದಾರೆ.
ಹಾಲಿನ ದರ ಏರಿಕೆಗೆ ಮನವಿ
ಬೆಂಗಳೂರು, ಏ. ೨೭: ಹಾಲಿನ ಸಂಸ್ಕರಣೆ, ಕಚ್ಚಾ ಸಾಮಗ್ರಿಗಳು, ವಿದ್ಯುತ್, ಸಾಗಾಣಿಕಾ ವೆಚ್ಚ ಸೇರಿದಂತೆ ಬಹುತೇಕ ಎಲ್ಲ ವೆಚ್ಚಗಳು ಶೇ.೩೦ ರಷ್ಟು ಹೆಚ್ಚಾಗಿವೆ. ಇದನ್ನು ಪರಿಗಣಿಸಿ ರೈತರಿಗೆ ಹೆಚ್ಚುವರಿ ದರ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಹಾಲಿನ ದರವನ್ನು ಹೆಚ್ಚಳ ಮಾಡುವಂತೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಅಮೂಲ್ ಸೇರಿದಂತೆ ದೇಶದ ವಿವಿಧ ಸಹಕಾರಿ ಮತ್ತು ಖಾಸಗಿ ಸಂಸ್ಥೆಗಳು ಹಾಲಿನ ಮಾರಾಟ ದರವನ್ನು ಹೆಚ್ಚಿಸಿವೆ. ನಂದಿನಿ ಹಾಲಿನ ಮಾರಾಟ ದರಕ್ಕೆ ಹೋಲಿಕೆ ಮಾಡಿದರೆ ಇತರೆ ಸಂಸ್ಥೆಗಳ ದರವು ಪ್ರತಿ ಲೀಟರ್‌ಗೆ ರೂ. ೮ ರಿಂದ ೧೦ ಹೆಚ್ಚಿದೆ. ಹೀಗಾಗಿ ನಂದಿನಿ ಹಾಲಿನ ಮಾರಾಟ ದರವನ್ನು ಕನಿಷ್ಟ ಪ್ರತಿ ಲೀಟರ್‌ಗೆ ರೂ. ೩ ಹೆಚ್ಚಿಸಲು ಕ್ರಮಕೈಗೊಳ್ಳಬೇಕು. ಇದರಿಂದ ಹಾಲು ಉತ್ಪಾದಕರಿಗೆ ಕನಿಷ್ಟ ರೂ. ೨ ಮತ್ತು ಹಾಲು ಉತ್ಪಾದಕರ ಸಹಕಾರಿ ಸಂಘ, ಹಾಲು ಒಕ್ಕೂಟ ಹಾಗೂ ಹಾಲು ಮಾರಾಟಗಾರರಿಗೆ ರೂ. ೧ ನೀಡಲು ಸಹಕಾರಿ ಯಾಗಲಿದೆ ಎಂದು ಪತ್ರ ಬರೆದು ಮುಖ್ಯಮಂತ್ರಿಯವರನ್ನು ಕೋರಿದ್ದಾರೆ.
ಬೈಬಲ್ ಬೋಧಿಸಿದ ಶಾಲೆಗೆ ನೋಟೀಸ್
ಬೆಂಗಳೂರು, ಏ. ೨೭: ಪಠ್ಯಕ್ರಮದ ಭಾಗವಾಗಿ ಬೈಬಲ್ ಅನ್ನು ಅಧ್ಯಯನ ಮಾಡಲು ಒತ್ತಾಯಿಸಿದ್ದಕ್ಕಾಗಿ ಬೆಂಗಳೂರಿನ ಕ್ಲಾರೆನ್ಸ್ ಶಾಲೆಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಮಂಗಳವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಯ ವರ್ತನೆಯಿಂದ ಕರ್ನಾಟಕ ಶಿಕ್ಷಣ ಕಾಯ್ದೆಯ ಉಲ್ಲಂಘನೆಯಾಗಿದೆ. ಶಾಲೆಗಳಲ್ಲಿ ಧಾರ್ಮಿಕ ವಿಚಾರ ಬೋಧನೆ ಮಾಡುವಂತಿಲ್ಲ. ಹೀಗಾಗಿ ಶಾಲೆಯ ವಿರುದ್ಧ ನೋಟೀಸ್ ಜಾರಿ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ದೆಹಲಿಯ ಮಹಮ್ಮದ್ ಪುರಕ್ಕೆ ಮಾಧವಪುರಂ ಎಂದು ಮರುನಾಮಕರಣ
ನವದೆಹಲಿ, ಏ. ೨೭: ದಕ್ಷಿಣ ದೆಹಲಿಯ ಮಹಮ್ಮದ್‌ಪುರ ಗ್ರಾಮವನ್ನು ಮಾಧವಪುರಂ ಎಂದು ಮರುನಾಮಕರಣ ಮಾಡಲಾಗಿದೆ ಎಂದು ದೆಹಲಿ ಬಿಜೆಪಿ ನಾಯಕರು ಬುಧವಾರ ಘೋಷಿಸಿದ್ದಾರೆ. ಮುನ್ಸಿಪಲ್ ಕಾರ್ಪೊರೇಷನ್ ಪ್ರಸ್ತಾವನೆಯನ್ನು ಅಂಗೀಕರಿಸಿದ ನಂತರ ಇಂದು ಮಾಧವಪುರದ ನಾಮಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ ಎಂದು ದೆಹಲಿ ಘಟಕದ ಅಧ್ಯಕ್ಷ ಆದೇಶ್ ಗುಪ್ತಾ ಹೇಳಿದ್ದಾರೆ. ಈಗ ಈ ಗ್ರಾಮವನ್ನು ಮಹಮ್ಮದ್‌ಪುರದ ಬದಲಿಗೆ ಮಾಧವಪುರಂ ಎಂದು ಕರೆಯಲಾಗುವುದು. ೭೫ ವರ್ಷಗಳ ಸ್ವಾತಂತ್ರö್ಯದ ಹೊರತಾಗಿಯೂ ಯಾವುದೇ ದೆಹಲಿಯ ಜನರು ಗುಲಾಮಗಿರಿಯ ಯಾವುದೇ ಸಂಕೇತದೊAದಿಗೆ ಸಂಬAಧ ಹೊಂದಲು ಬಯಸುವುದಿಲ್ಲ ಎಂದು ಗುಪ್ತಾ ತಿಳಿಸಿದ್ದಾರೆ. ಮಹಮ್ಮದ್‌ಪುರ ಹೆಸರನ್ನು ಮಾಧವಪುರಂ ಎಂದು ಬದಲಾಯಿಸುವ ಪ್ರಸ್ತಾವನೆಯನ್ನು ಅಂಗೀಕರಿಸಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ದೆಹಲಿ ಸರ್ಕಾರಕ್ಕೆ ಕಳುಹಿಸಲಾಗಿತ್ತು.