ರಾಜ್ಯದ ಪ್ರಮುಖ ಹಾಕಿ ಚಟುವಟಿಕೆಗಳ ಕೇಂದ್ರಗಳ ಲ್ಲೊಂದು ಕೊಡಗು ಜಿಲ್ಲೆ. ಇಲ್ಲಿ ಈ ಆಟದ ಬಗ್ಗೆ ಪ್ರೀತಿಯಿದೆ. ಉಳಿಸಿ ಬೆಳೆಸಬೇಕೆನ್ನುವ ತುಡಿತವೂ ಇದೆ.

ಕಳೆದ ಮೂರು ವರ್ಷಗಳ ಹಿಂದೆ ಕೊಡಗಿನಲ್ಲಿ ಬಿದ್ದ ಬಾರಿ ಮಳೆ ಹಾಗೂ ಮಹಾಮಾರಿ ಕೊರೊನಾ ಸಾಂಕ್ರಾಮಿಕ ಪಿಡುಗಿನಿಂದ ಕೊಡವ ಕುಟುಂಬಗಳ ಹಾಕಿ ಟೂರ್ನಿಗೆ ತೊಡಕು ಉಂಟಾಗಿತ್ತು. ಕಳೆದ ೨೦ ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದ ಕೊಡವ ಕುಟುಂಬಗಳ ಹಾಕಿ ಟೂರ್ನಿ ಕಳೆದ ನಾಲ್ಕು ವರ್ಷಗಳಿಂದ ಹಲವು ಕಾರಣಗಳಿಂದ ನಡೆಯಲಿಲ್ಲ. ಇದು ಆತಂಕಕ್ಕೆ ಕಾರಣವಾಯಿತು.

ಪಾಂಡAಡ ಕುಟ್ಟಣಿ ಅವರು ಹುಟ್ಟು ಹಾಕಿದ್ದ ಕೊಡವ ಹಾಕಿ ಅಕಾಡೆಮಿ ಕಳೆದ ಮೂರು ವರ್ಷಗಳಿಂದ ಚಟುವಟಿಕೆ ನಡೆಸದೆ ಸುಮ್ಮನೆ ಕುಳಿತಿತ್ತು. ಈ ಮದ್ಯೆ ಹಲವು ಪದಾಧಿಕಾರಿಗಳು ರಾಜೀನಾಮೆ ನೀಡಿದ್ದರು. ಅಕಾಡೆಮಿ ಆಡಳಿತದ ಚುಕ್ಕಾಣಿ ಹಿಡಿದವರು ಸರ್ವಾಧಿಕಾರಿಗಳಂತಾಗಿರುವುದು ಕೂಡ ಕೊಡವ ಕುಟುಂಬಗಳ ಆಟದ ಬೆಳವಣಿಗೆಗೆ ಅಡ್ಡಿ ಉಂಟಾಯಿತು. ಅಕಾಡೆಮಿಯ ಹಲವು ಸದಸ್ಯರು ಚುನಾವಣೆ ನಡೆಸಲು ಹೋರಾಟಕ್ಕೆ ಇಳಿದಿದ್ದರು. ಅಕಾಡೆಮಿಯಲ್ಲಿನ ಒಂದು ಬಣದÀ ನಡುವಿನ ಕಿತ್ತಾಟದಿಂದ ಚುನಾವಣೆ ನಡೆಸುವಲ್ಲಿಯೂ ವಿಳಂಬವಾಯಿತು.

ಇದರಿAದ ಎಚ್ಚೆತ್ತ ಅಕಾಡೆಮಿಯ ಆಡಳಿತ ಮಂಡಳಿಯು ಈ ವರ್ಷ ಚುನಾವಣೆ ನಡೆಸಲು ಮುಂದಾಯಿತು. ನಾಮಪತ್ರ ಸಲ್ಲಿಕೆಯ ಪ್ರತಿಕ್ರಿಯೆ ನಡೆಯಿತು. ನಾಮಪತ್ರ ವಾಪಸಾತಿ ನಂತರ ಎಲ್ಲ ಗೊಂದಲದ ನಡುವೆ ಕೊಡವ ಹಾಕಿ ಅಕಾಡೆಮಿಯು ಅನಿರೀಕ್ಷಿತ ಎನ್ನುವಂತೆ ರಾಜ್ಯ ಯುವಜನ ಇಲಾಖೆ ನಿವೃತ್ತ ಹಿರಿಯ ಹಾಕಿ ತರಬೇತಿದಾರ ಮೇಕೇರಿರ ನಂಜಪ್ಪ ಪೆಮ್ಮಯ್ಯ (ರವಿ) ಅವರು ಅಕಾಡೆಮಿಯ ಕಾರ್ಯಾಧ್ಯಕ್ಷರಾಗಿ ಅವಿರೋಧ ವಾಗಿ ಆಯ್ಕೆಯಾದರು. ಪೆಮ್ಮಯ್ಯ ನೇತೃತ್ವದ ಸಮಿತಿ ಈಗ ಅಕಾಡೆಮಿಯ ಚುಕ್ಕಾಣಿ ಹಿಡಿಯಲಿದೆ. ಮೇ. ೭ ಕ್ಕೆ ಕೊಡವ ಹಾಕಿ ಅಕಾಡೆಮಿಯ ಸರ್ವ ಸದಸ್ಯರ ಸಭೆ ಬಾಳಗೋಡು ಕೊಡವ ಫೆಡರೇಷನ್ ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲೆಯಲ್ಲಿ ಹಾಕಿ ಚಟುವಟಿಕೆಗೆ ಮತ್ತೆ ರಂಗೇರುವ ಆಸೆಯ ಕಿರಣ ಮೂಡಿದೆ. ಕೊಡವ ಕುಟುಂಬಗಳ ಹಾಕಿ ಟೂರ್ನಿಗೆ ಮುಂದಿನ ವರ್ಷದಿಂದ ಚಾಲನೆ ಸಿಗುವ ಅವಕಾಶ ಕೂಡಿಬರಲಿದೆ.

ಕೊಡವ ಹಾಕಿ ಅಕಾಡೆಮಿಯಲ್ಲಿನ ಗುಂಪುಗಾರಿಕೆಯಿAದ ಖಂಡಿತವಾಗಿಯೂ ಒಳಿತಾಗದು. ಕಿತ್ತಾಟವನ್ನು ನಿಲ್ಲಿಸಿ ಹಾಕಿ ಆಟದ ಬೆಳವಣಿಗೆ ಬಗ್ಗೆ ಚಿಂತನೆ ನಡೆಸುವುದು ಈಗಿನ ತುರ್ತು ಅಗತ್ಯ. ಜಿಲ್ಲೆಯ ಐದು ತಾಲ್ಲೂಕು ಕೇಂದ್ರಗಳಲ್ಲಿ ಹಾಕಿ ಟೂರ್ನಿ ಮತ್ತು ತರಬೇತಿ ಶಿಬಿರಗಳು ನಡೆಸುವ ಕಡೆಗೂ ಗಮನ ಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೊಡವ ಹಾಕಿ ಅಕಾಡೆಮಿ ಮೇಲೆ ದೊಡ್ಡ ಜವಾಬ್ದಾರಿಯಿದೆ. ಹಾಕಿ ಆಟವು ಜಿಲ್ಲೆಯಲ್ಲ್ಲಿ ಉತ್ಸಾಹದಿಂದ ಗರಿಗೆದರುವಂತೆ ಮಾಡುವತ್ತ ಚಿತ್ತಹರಿಸಬೇಕು.

ಪ್ರದರ್ಶನ ಮಟ್ಟದಲ್ಲಿ ಬಹಳ ಹಿಂದಿರುವ ಜಿಲ್ಲೆಯ ಆಟಗಾರರು ರಾಷ್ಟç ಮಟ್ಟಕ್ಕೆ ಬೆಳೆಯಬೇಕು.ಆ ನಿಟ್ಟಿನಲ್ಲಿ ಕೊಡವ ಹಾಕಿ ಅಕಾಡೆಮಿಯು ಮೂಲ ಸೌಕರ್ಯ ಒದಗಿಸುವ ಜೊತೆಗೆ ಉತ್ತಮ ತರಬೇತಿ ಸಿಗುವಂತೆಯೂ ಮಾಡುವುದು ಅಗತ್ಯ. ಕೊಡವ ಕುಟುಂಬಗಳ ಹಾಕಿ ಟೂರ್ನಿ ಮುಂದಿನ ದಿನಗಳಲ್ಲಿ ಬಾಳಗೋಡು ಕೊಡವ ಫೆಡರೇಷನ್ ಕೇಂದ್ರದ ಮೈದಾನದಲ್ಲಿಯೇ ನಡೆಯುವಂತೆ ಆಗಬೇಕು.

ಪ್ರತಿಭಾವಂತ ಆಟಗಾರರ ದೊಡ್ಡ ಪಡೆಯನ್ನು ಸಜ್ಜುಗೊಳಿಸುವ ಕಡೆಗೂ ಅಕಾಡೆಮಿ ಗಮನ ನೀಡುವ ಅಗತ್ಯವಿದೆ. ಅದಕ್ಕಾಗಿ ತರಬೇತಿ ಕೇಂದ್ರ ಸ್ಥಾಪನೆ ಆಗಬೇಕು. ಇದು ಆಟದಲ್ಲಿ ಪರಿಣತಿ ಹೊಂದಿರುವವರ ನೇತೃತ್ವ ದಲ್ಲಿಯೇ ನಡೆಯಬೇಕಾದ ಕಾರ್ಯ. ಒಂದೆಡೆ ಆಟಗಾರರನ್ನು ರೂಪಿಸುವ ಜೊತೆಗೆ ಇನ್ನೊಂದೆಡೆ ಪ್ರಭಾವಿ ತರಬೇತಿದಾರರನ್ನುಕೂಡ ಸಜ್ಜುಗೊಳಿಸಬೇಕು. ಹಾಕಿ ಆಟಗಾರರನ್ನು ಬೆಳೆಸಲು ಶ್ರಮಿಸಿದÀಲ್ಲಿ ಹೊಸದೊಂದು ಶಕೆ ಆರಂಭವಾಗುತ್ತದೆ. ಇದು ಮಹತ್ವದ ಅಂಶವೆನ್ನುವುದನ್ನು ಮರೆಯಬಾರದು.

ಅಕಾಡೆಮಿ ಚುನಾವಣೆಯಲ್ಲಿ ಅನಗತ್ಯ ರಾಜಕೀಯ : ಸಾಕಷ್ಟು ಸುದ್ದಿ ಮಾಡಿ ನಗೆಪಾಟಲಿಗೆ ಈಡಾದ ಕೊಡವ ಹಾಕಿ ಅಕಾಡೆಮಿಯ ಪ್ರತಿಷ್ಠಿತ ಚುನಾವಣೆಯಲ್ಲಿ ಅನಗತ್ಯ ರಾಜಕೀಯ ತಾಂಡವವಾಡಿತ್ತು. ಜಿಲ್ಲೆಯ ಹಾಕಿ ಲೋಕದ ಅಭಿವೃದ್ದಿಗಾಗಿ ಇರುವ ಅಕಾಡೆಮಿಯೊಂದನ್ನು ರಾಜಕೀಯ ಕಣವನ್ನಾಗಿಸಿಕೊಳ್ಳಲು ಕೆಲವು ಕಾಣದ ಕೈಗಳು ನಡೆಸಿದ ಯತ್ನ ನಿಜಕ್ಕೂ ಖೇದಕರವಾದದ್ದು.

ಕೊಡವ ಹಾಕಿ ಅಕಾಡೆಮಿಗೆ ವಿಶೇಷ ಸ್ಥಾನಮಾನ ಇದೆ. ಕಾಲಚಕ್ರ ಉರುಳಿದಂತೆ ಅಕಾಡೆಮಿಯಲ್ಲಿ ಹಾಕಿ ಕರ್ನಾಟಕ ಹಾಗೂ ಹಾಕಿ ಕೊಡಗು ರಂಗ ಪ್ರವೇಶ ಮಾಡಿತು. ಹಾಕಿ ಕ್ರೀಡೆಯನ್ನು ಬೆಳೆಸಿ ಪ್ರೋತ್ಸಾಹ ನೀಡುವ ಬದಲು ರಾಜಕೀಯ ಪ್ರಾರಂಭವಾಯಿತು. ಇದರಿಂದ ಎಚ್ಚೆತ್ತ ಕೊಡವ ಹಾಕಿ ಅಕಾಡೆಮಿಯ ಸ್ಥಳೀಯ ಹಲವು ಸದಸ್ಯರು ಒಗ್ಗಟ್ಟಿನಿಂದ ಹೋರಾಡಲು ನಿರ್ಧರಿಸಿದರು. ಹಾಕಿ ಕರ್ನಾಟಕದ ಕೆಲವು ಮಂದಿ ಅಕಾಡೆಮಿಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಶತಪ್ರಯತ್ನ ನಡೆಸಿದರು. ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆಯಲ್ಲಿ ಹಲವು ದೋಷಗಳು ಉಂಟಾಗಿದ್ದರಿAದ ಹಲವರ ನಾಮಪತ್ರಗಳು ಪರಿಶೀಲನೆ ವೇಳೆ ತಿರಸ್ಕೃತಗೊಂಡವು. ಇದರಲ್ಲಿ ಪ್ರಮುಖರೆಂದರೆ ಮಾಜಿ ಅಂತರರಾಷ್ಟಿçÃಯ ಆಟಗಾರರಾದ ಅಂಜಪರವAಡ ಬಿ. ಸುಬ್ಬಯ್ಯ, ಚೆಪ್ಪುಡಿರ ಎಸ್. ಪೂಣಚ್ಚ ಹಾಗೂ ಭಾರತ ಹಾಕಿ ತಂಡದ ಹಿರಿಯ ತರಬೇತಿದಾರ ಬಿ. ಜೆ. ಕಾರ್ಯಪ್ಪ. ಇನ್ನು ಚುನಾವಣೆಯ ನಾಮಪತ್ರ ಸಲ್ಲಿಕೆ ಮತ್ತು ವಾಪಸಾತಿಯ ಸಮಯದಲ್ಲಿ ನಡೆದ ಕೆಲವು ಘಟನೆಗಳನ್ನು ಹಲವರಿಂದ ತಿಳಿದಾಗ ನಿಜಕ್ಕೂ ಅಚ್ಚರಿ ಎನಿಸಿತು.

ಜಿಲ್ಲೆಯಲ್ಲಿ ಹಾಕಿಯ ಅಭಿವೃದ್ಧಿ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದ ಭಾರತ ತಂಡದ ತರಬೇತಿ ಶಿಬಿರದಲ್ಲಿದ್ದ ರಾಷ್ಟಿçÃಯ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ ಮತ್ತು ಹಲವರು ಕೊಡಗು ಹಾಕಿ ಅಕಾಡೆಮಿಗೆ ರಂಗಪ್ರವೇಶ ಮಾಡಲು ಮೊದಲು ನಿರ್ಧರಿಸಿದ್ದರು. ಇವರುಗಳು ಕೊನೆಯ ಗಳಿಗೆಯಲ್ಲಿ ನಡೆಸಿದ ನಾಟಕೀಯ ನಡಾವಳಿ ನಿಜಕ್ಕೂ ಬೇಸರತರಿಸುವಂತಿತ್ತು. ನಾಮಪತ್ರ ಸಲ್ಲಿಸುವ ಮುನ್ನ ಇವರು ತೆಗೆದುಕೊಂಡ ನಿರ್ಧಾರವನ್ನು ನೆನಪಿಸಿದರೆ ನಿಜಕ್ಕೂ ಬೇಸರವಾಗುತ್ತದೆ.

ಅಕಾಡೆಮಿಯ ಚುನಾವಣಾ ಪ್ರಕ್ರಿಯೆ ಮುಗಿದ ನಂತರ ನೂತನ ಪದಾಧಿಕಾರಿಗಳು ನೇಮಕಗೊಂಡವರ ಪಟ್ಟಿ ಇಂತಿದೆ.

ಅಧ್ಯಕ್ಷರು : ಪಾಂಡAಡ ಕುಟ್ಟಪ್ಪ ಬೋಪಣ್ಣ, ಕಾರ್ಯಾಧ್ಯಕ್ಷರು : ಮೇಕೇರಿರ ನಂಜಪ್ಪ ಪೆಮ್ಮಯ್ಯ (ರವಿ), ಉಪಾಧ್ಯಕ್ಷರುಗಳು : ಬಡಕಡ ದೀನಾ ಪೂವಯ್ಯ, ಮಾದಂಡ ಎಸ್. ಪೂವಯ್ಯ, ಕುಕ್ಕೆರ ಜಯಾ ಚಿಣ್ಣಪ್ಪ. ಗೌರವಕಾರ್ಯದರ್ಶಿ : ಮಾಳೇಟಿರ ಶ್ರೀನಿವಾಸ್, ಜಂಟಿ ಕಾರ್ಯದರ್ಶಿ : ಮುಕ್ಕಾಟಿರ ರನ್ನಾ ಭೀಮಯ್ಯ, ಕಾರ್ಯಕಾರಿ ಸಮಿತಿ ಸದಸ್ಯರು : ಮಾರ್ಚಂಡ ಗಣೇಶ್ ಪೊನ್ನಪ್ಪ, ನೆರ್ಪಂಡ ಹರ್ಷಾ, ಕುಯಿಮಂಡ ಕಿರಣ್‌ಕುಮಾರ್, ಕಲಿಯಂಡ ಸಂಪನ್ ಅಯ್ಯಪ್ಪ, ಚೇನಂಡ ಸುರೇಶ್ ನಾಣಯ್ಯ, ಚೆಯ್ಯಂಡ ಸತ್ಯ ಗಣಪತಿ, ಕುಲ್ಲೇಟಿರ ಅರುಣಾ ಬೇಬಾ ಹಾಗೂ ಕಂಬೀರAಡ ರಾಖಿ ಪೂವಣ್ಣ.

ಕೊಡವ ಹಾಕಿ ಅಕಾಡೆಮಿಗೆ ಅವಿರೋಧವಾಗಿ ಆಯ್ಕೆಗೊಂಡ ನೂತನ ಆಡಳಿತ ಮಂಡಳಿಯ ಪಟ್ಟಿಯನ್ನು ಗಮನಿಸಿದರೆ ಸಮರ್ಥ ಆಡಳಿತಗಾರರು ಹಾಗೂ ಯುವ ಪಡೆಯ ತಂಡವೊAದು ಸಿದ್ಧವಾಗಿರುವುದು ಸಂತೋಷದ ವಿಷಯ.

ಹಾಕಿ ಆಟದ ಪ್ರಗತಿಯ ಬಗ್ಗೆ ಚಿಂತನೆ ನಡೆಸುವ ನೆಲೆಯಾಗಬೇಕು. ಈ ಎಲ್ಲ ಆಶಯಗಳು ಸಾಕಾರವಾದರೆ ಪುಟ್ಟ ಜಿಲ್ಲೆಯ ಹಾಕಿಗೆ ಹೊಸ ಚೈತನ್ಯದೊಂದಿಗೆ ಪುಟಿದೆದ್ದು ನಿಲ್ಲುವುದು ಖಚಿತ.