ವೀರಾಜಪೇಟೆ, ಏ. ೨೬: ವೀರಾಜಪೇಟೆ ವಕೀಲರ ಸಂಘದ ವತಿಯಿಂದ ಇತ್ತೀಚೆಗೆ ಸಂತ ಅನ್ನಮ್ಮ ಶಾಲೆಯ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಕ್ರಿಕೆಟ್ ಆಟ ಆಡುವ ಮೂಲಕ ಹಿರಿಯ ವಕೀಲರಾದ ಎಂ.ಕೆ ಪೂವಯ್ಯ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ವಕೀಲರಿಗೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಕ್ರಿಕೆಟ್, ಗುಂಡು ಎಸೆತ, ಸ್ಲೋ ಬೈಕ್ ರೇಸ್, ಹಗ್ಗ ಜಗ್ಗಾಟ ಮುಂತಾದ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತ ವಕೀಲರುಗಳಿಗೆ ವಿವಿಧ ಬಗೆಯ ಅಲಂಕಾರಿಕ ಹಾಗೂ ಔಷಧಿ ಸಸ್ಯಗಳನ್ನು ಬಹುಮಾನವಾಗಿ ನೀಡಲಾಯಿತು.ಕಾರ್ಯಕ್ರಮದಲ್ಲಿ ವೀರಾಜಪೇಟೆಯ ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಸುಜಾತ, ಸಿವಿಲ್ ನ್ಯಾಯಾಧೀಶೆ ಹಾಗೂ ಮ್ಯಾಜಿಸ್ಟ್ರೇಟ್ ಮಹಾಲಕ್ಷಿö್ಮ ವಿಶೇಷ ಆಹ್ವಾನಿತರಾಗಿ ಆಗಮಿಸಿ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.
ವಕೀಲರ ಸಂಘದ ಕ್ರೀಡಾಕೂಟದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಐ.ಆರ್ ಪ್ರಮೋದ್, ಕಾರ್ಯದರ್ಶಿ ಎಂ.ಕೆ ದಿನೇಶ್, ಸಂಘದ ಪದಾಧಿಕಾರಿಗಳು ಹಾಜರಿದ್ದರು. ಕ್ರೀಡಾ ಕಾರ್ಯದರ್ಶಿ ವಿ. ಎಸ್ ಪ್ರೀತಮ್ ಸ್ವಾಗತಿಸಿದರು, ಖಜಾಂಜಿ ವಿ.ಜಿ ರಾಕೇಶ್ ವಂದಿಸಿದರು. ವಕೀಲೆ ಅನುಪಮ ಕಿಶೋರ್ ಕಾರ್ಯಕ್ರಮ ನಿರೂಪಿಸಿದರು.