ಪೊನ್ನಂಪೇಟೆ, ಏ. ೨೬: ತಾ. ೨೩ ಮತ್ತು ೨೪ ರಂದು ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡ ವಿಶ್ವವಿದ್ಯಾನಿಲಯದಲ್ಲಿ ನಡೆದ ರಾಷ್ಟçಮಟ್ಟದ ವಿಚಾರ ಸಂಕಿರಣದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ದಕ್ಷಿಣ ಭಾರತೀಯ ಭಾಷೆಗಳಿಗೆ ತಮಿಳು ಶಾಸ್ತಿçÃಯ ಕೃತಿಗಳ ಅನುವಾದ ಎಂಬ ವಿಷಯದಲ್ಲಿ ಚೆನ್ನೆöÊನ ಸೆಂಟ್ರಲ್ ಇನ್ಸಿ÷್ಟಟ್ಯೂಟ್ ಆಫ್ ಕ್ಲಾಸಿಕಲ್ ತಮಿಳ್ ಸಂಸ್ಥೆ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ತಿರುಕುರಳ್ ಕೊಡವ ಭಾಷಾನುವಾದ ವಿಷಯದ ಬಗ್ಗೆ ಇವರು ತಮ್ಮ ವಿಚಾರಧಾರೆಯನ್ನು ಮಂಡಿಸಿದರು. ರೇವತಿ ಅವರು ಈಗಾಗಲೇ ತಮಿಳು ಶಾಸ್ತಿçÃಯ ಕೃತಿ ತಿರುಕುರಳ್ ನ ಅನುವಾದ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.