ಮಡಿಕೇರಿ, ಏ. ೨೫: ಆದಿವಾಸಿ ಕಾಫಿ ಮತ್ತು ಕರಿಮೆಣಸು ಬೆಳೆಗಾರರ ಸಂಘದ ವತಿಯಿಂದ ವೀರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಗಿರಿಜನ ಕಾಲೋನಿಯಲ್ಲಿ ಸಂಘದ ರೈತ ಆಸಕ್ತಿ ಗುಂಪುಗಳಿಗೆ ಮೌಲ್ಯವರ್ಧನೆಗಾಗಿ ವನ್ ಧನ್ ವಿಕಾಸ್ ಯೋಜನೆಡಿಯಲ್ಲಿ ಕಾಳು ಮೆಣಸು ಬಿಡಿಸುವ ಯಂತ್ರ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಕಾಫಿ ಮಂಡಳಿಯ ಗಿರಿಜನ ಕಾಫಿ ಮತ್ತು ಕರಿಮೆಣಸು ಸಮಗ್ರ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಏಣಿ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕಾಫಿ ಮಂಡಳಿಯ ಉಪ ನಿರ್ದೇಶಕಿ ಡಾ. ಶ್ರೀದೇವಿ, ಮಡಿಕೇರಿಯ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಅಧಿಕಾರಿ ಚಂದ್ರಶೇಖರ್, ಸಕಲೇಶಪುರ ಸಾಂಬಾರ ಪದಾರ್ಥ ಮಂಡಳಿಯ ವಿಜ್ಞಾನಿಗಳಾದ ಡಾ. ನೂಲ್ವಿ ಮತ್ತು ಡಾ. ಕೃಷ್ಣಭಟ್ ರವರು ಭಾಗವಹಿಸಿ ವಿತರಣೆ ಮಾಡಿದರು.
ಈ ಸಂದರ್ಭ ಕಾಫಿ ಮಂಡಳಿಯ ಉಪ ನಿರ್ದೇಶಕಿ ಡಾ!! ಶ್ರಿದೇವಿ ಮಾತನಾಡಿ ಗಿರಿಜನ ಕಫಿ ಮತ್ತು ಕರಿಮೆಣಸು ಸಮಗ್ರ ಅಭಿವೃದ್ಧಿ ಯೋಜನೆಯಡಿಯಲ್ಲಿ ಮಾಲ್ದಾರೆಯ ಆದಿವಾಸಿ ಕಾಫಿ ಮತ್ತು ಕರಿಮೆಣಸು ಬೆಳೆಗಾರರ ಸಂಘಕ್ಕೆ ಒಟ್ಟು ೨೭ ಮೆಣಸು ಕೊಯ್ಲು ಮಾಡುವ ಏಣಿಗಳನ್ನು ವಿತರಣೆ ಮಾಡಲಾಗಿದೆ, ಸುಮಾರು ೧೩೨ ರೈತರ ತೋಟದ ಮಣ್ಣು ಪರೀಕ್ಷೆ ಮಾಡಲಾಗಿದೆ, ಸ್ವಲ್ಪ ದಿನಗಳ ನಂತರ ಸುಣ್ಣವನ್ನು ವಿತರಣೆ ಮಾಡಲಾಗುವುದು, ೧೨೬ ಜನ ರೈತರಿಗೆ ೪೦೦ ಕಾಫಿ ಕೊಯ್ಲು ಮ್ಯಾಟ್ ವಿತರಿಸಲಾಗಿದೆ, ಮುಂದಿನ ದಿನಗಳಲ್ಲಿ ಟಾರ್ಪಲ್ ವಿತರಿಸಲಾಗುವುದು. ಅದರ ಜೊತೆಗೆ ಈ ಸಂಘಕ್ಕೆ ವನ್ ಧನ್ ಯೋಜನೆಡಿಯಲ್ಲಿ ಅನುದಾನ ಬಿಡುಗಡೆಯಾಗಿದ್ದು ಈ ಅನುದಾನದಲ್ಲಿ ಕಾಳುಮೆಣಸು ಮೌಲ್ಯವರ್ಧನೆ ಮಾಡಿ ಉತ್ತಮ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ಸಂಘವು ಶಕ್ತವಾಗಿರುವುದು ಸಂತಷದ ವಿಷಯ. ಇದರೊಂದಿಗೆ ಸಂಘಕ್ಕೆ ಮತ್ತು ರೈತರಿಗೆ ಉತ್ತಮ ಆದಾಯಗಳಿಸಲು ಸಹಾಯವಾಗುತ್ತದೆ ಹಾಗೆಯೇ ಕಾಫಿ ಮಂಡಳಿಯಿAದ ದೊರೆಯುತ್ತಿರುವ ಸಹಾಯಧನವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಅಧಿಕಾರಿ ಯಾದ ಚಂದ್ರಶೇಖರ್ ಮಾತನಾಡಿ ನಿಗಮದಿಂದ ಗಿರಿಜನರ ಯೋಜನೆಗೆ ಹಣ ನೀಡಲಾಗಿದ್ದು ಕಾಫಿ ಮಂಡಳಿಯು ಜಾರಿಗೆ ತರುತ್ತಿದೆ. ರೈತರು ನಮ್ಮ ಯೋಜನೆಯ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು, ಆಸಕ್ತಿಯಿಂದ ಮುಂದೆ ಬಂದು ಆರ್ಥಿಕವಾಗಿ ಸದೃಢರಾಗಬೇಕು ಎಂದರು. ಆದಿವಾಸಿ ಕಾಫಿ ಮತ್ತು ಕರಿಮೆಣಸು ಬೆಳೆಗಾರರ ಸಂಘದ ಅಧ್ಯಕ್ಷ ವೈ.ಎಂ. ಕಾಳ ಮಾತನಾಡಿ ಕಾಫಿ ಮಂಡಳಿಯ ಸಹಕಾರದಿಂದ ನಮ್ಮ ಸಂಘವನ್ನು ಸ್ಥಾಪಿಸಿ ಇಲ್ಲಿಗೆ ೩ ವರ್ಷಗಳು ಕಳೆದಿವೆ, ಇದರಿಂದ ನಮ್ಮ ಬುಡಕಟ್ಟು ಕಾಫಿ ಬೆಳೆಗಾರರು ಒಗ್ಗಟ್ಟಿನಿಂದ ಅಭಿವೃದ್ಧಿ ಯೊಂದಲು ಸಹಾಯಕವಾಗಿದೆ, ಮುಂದಿನ ದಿನಗಳಲ್ಲಿ ಹೆಚ್ಚಿನ ಲಾಭಗಳಿಸಲು ಶ್ರಮವಹಿಸಲಾಗುವುದು ಎಂದರು.
ಈ ಸಂದರ್ಭ ಸಕಲೇಶಪುರದ ಸಂಬಾರ ಪದಾರ್ಥ ಮಂಡಳಿಯ ವಿಜ್ಞಾನಿಗಳು ಮೆಣಸು ಬೆಳೆಗೆ ಸಂಬAಧಪಟ್ಟ ಉಪಯುಕ್ತ ಮಾಹಿತಿಯನ್ನು ರೈತರಿಗೆ ತಿಳಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್ ಸದಸ್ಯ ಇಸ್ಮಾಯಿಲ್, ಕಾಫಿ ಮಂಡಳಿಯ ಸಿದ್ದಾಪುರ ವಲಯದ ಕಿರಿಯ ಸಂಪರ್ಕ ಅಧಿಕಾರಿ ಖದಿಜ, ತಾಂತ್ರಿಕ ಸಹಾಯಕರಾದ ಮಧು. ಕೆ. ಹೆಚ್, ಯೋಜನಾ ಸಹಾಯಕರಾದ ಮುತ್ತಪ್ಪ, ಜವೀನ್, ಸಂಘದ ಕಾರ್ಯದರ್ಶಿ ದಿವಾಕರ್ ಇದ್ದರು.