ಮಡಿಕೇರಿ, ಏ. ೨೫: ಮಡಿಕೇರಿ ತಾಲೂಕು ಶ್ರೀ ಅರ್ಧನಾರೀಶ್ವರ ದೇವಾಲಯದ ವಾರ್ಷಿಕ ಉತ್ಸವ ತಾ. ೨೭ ರಿಂದ ಮೇ ೧ರವರೆಗೆ ನಡೆಯಲಿದ್ದು, ಅದರ ಅಂಗವಾಗಿ ತಾ. ೨೭ ಬೆಳಗ್ಗೆ ಏಳು ಗಂಟೆಗೆ ಬೊಟ್ಲಪ್ಪ ದೇವಾಲಯದಿಂದ ತೀರ್ಥ ತರುವುದು, ಹತ್ತು ಗಂಟೆಗೆ ಗಣಪತಿ ಹೋಮ, ಶ್ರೀ ಅರ್ಧನಾರಿಶ್ವರ ದೇವರಿಗೆ ತೀರ್ಥಾಭಿಷೇಕ, ಮಹಾಪೂಜೆ, ಅನ್ನ ಸಂತರ್ಪಣೆ.
ಸAಜೆ ಆರು ಗಂಟೆಗೆ ಭಂಡಾರ ತೆಗೆದುಕೊಂಡು ಬರುವುದು, ಅಂದೀಬೆಳಕು, ದೇವರ ಬಲಿ, ತಾ೨೮ ಬೆಳಿಗ್ಗೆ ೪.೩೦ಕ್ಕೆ ದೇವರ ನೃತ್ಯ ಬಲಿ ಬರುವುದು ನಂತರ ಹತ್ತು ಗಂಟೆಗೆ ಹಬ್ಬದ ಕಟ್ಟು ಮುರಿಯುವುದು, ಮಹಾಪೂಜೆ, ಅನ್ನ ಸಂತರ್ಪಣೆ, ದೇವರ ಬಲಿ, ವಸಂತ ಪೂಜೆ, ಸಂಜೆ ಐದು ಗಂಟೆಗೆ ದೇವರ ಜಳಕ ನಂತರ ದೇವರ ನೃತ್ಯ ಬಲಿ ಬರುವುದು, ಅನ್ನ ಸಂತರ್ಪಣೆ ನಡೆಯಲಿದೆ
ತಾ.೨೯ ಬೆಳಗ್ಗೆ ಹತ್ತು ಗಂಟೆಗೆ ಶುದ್ಧ ಕಲಶ, ಮಹಾಪೂಜೆ, ಅನ್ನಸಂತರ್ಪಣೆ ತಾ.೩೦ ಸಂಜೆ ಐದು ಗಂಟೆಗೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ದೀಪ ತರುವುದು, ಮೇಲೇರಿಗೆ ಅಗ್ನಿ ಸ್ಪರ್ಶ, ಮೂರ್ತಿಗಳ ಕೋಲ
ಮೇ ೧ ಬೆಳಿಗ್ಗೆ ೯.೩೦ರಿಂದ ಶ್ರೀ ಅಜ್ಜಪ್ಪ ದೇವರ ಕೋಲ, ಶ್ರೀ ವಿಷ್ಣುಮೂರ್ತಿ ಕೋಲ ೧೦.೩೦ಕ್ಕೆ ಮೇಲೇರಿ ಬೀಳುವುದು ಅನ್ನ ಸಂತರ್ಪಣೆ, ದೇವರ ಬೇಟೆ ಕಾರ್ಯಕ್ರಮಗಳು ನಡೆಯಲಿದೆ.