ಮಡಿಕೇರಿ, ಏ. ೨೬: ಕೊಡವಾಮೆರ ಕೊಂಡಾಟ ಸಂಘಟನೆಯ ವಾರ್ಷಿಕ ಮಹಾಸಭೆ ತಾ. ೩೦ ರಂದು ಬೆ. ೧೦ ಗಂಟೆಗೆ ವೀರಾಜಪೇಟೆಯ ಅಖಿಲಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಲಿದೆ. ಸಭೆಯಲ್ಲಿ ವಾರ್ಷಿಕ ಚಟುವಟಿಕೆಗಳ ಚರ್ಚೆಯೊಂದಿಗೆ ಕೊಡವ ತಿಂಗಳ ಪ್ರಕಾರ ದಿನದ ವಿವರ ಪಟ್ಟಿ ಬಿಡುಗಡೆ ಹಾಗೂ ಇತ್ತೀಚೆಗೆ ನಡೆಸಲಾದ ಜೂ. ಕುಂಞ ಜೂವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ತಿಳಿಸಿದ್ದಾರೆ.