ಮಡಿಕೇರಿ, ಏ.೨೫: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿನ ಪ್ರಶ್ನೆ ಪತ್ರಿಕೆಯಲ್ಲುಂಟಾಗಿರುವ ಎಡವಟ್ಟಿನ ಬಗ್ಗೆ ಪದವಿ ಪೂರ್ವ ಶಿಕ್ಷಣಾ ಇಲಾಖಾ ನಿರ್ದೇಶಕರಿಗೆ ಮುಂದಿನ ಕ್ರಮಕ್ಕಾಗಿ ಮಾಹಿತಿ ನೀಡಲಾಗಿದೆ ಎಂದು ಪ.ಪೂ. ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟರಾಜು ತಿಳಿಸಿದ್ದಾರೆ.
ತಾ. ೨೨ರಂದು ನಡೆದ ವ್ಯವಹಾರ ಅಧ್ಯಯನ ಪರೀಕ್ಷೆಯಲ್ಲಿ ಕುಶಾಲನಗರ ಕನ್ನಡ ಭಾರತಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿಯೋರ್ವಳಿಗೆ ದೊರೆತ ಪ್ರಶ್ನೆ ಪತ್ರಿಕೆಯಲ್ಲಿ ಬೇರೆ ವಿಷಯದ ಪ್ರಶ್ನೆಗಳು ಅಚ್ಚಾಗಿದ್ದವು. ಇದನ್ನು ಸರಿಯಾಗಿ ಗಮನಿಸದ ವಿದ್ಯಾರ್ಥಿನಿ ಪರೀಕ್ಷೆ ಬರೆದು ಹೊರಬಂದ ನಂತರ ಗೆಳತಿಯೊಂದಿಗೆ ಚರ್ಚಿಸುವಾಗ ವಿಷಯ ಗೊತ್ತಾಗಿದೆ. ಈ ಬಗ್ಗೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಿಗೆ ತಿಳಿಸಿದಳಾದರೂ ಅದಾಗಲೇ ಉತ್ತರ ಪತ್ರಿಕೆಗಳನ್ನು ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ಮೇಲ್ವಿಚಾರಕರು ತಿಳಿಸಿದರು.
ಈ ವಿಚಾರಕ್ಕೆ ಸಂಬAಧಿಸಿದAತೆ ವಿದ್ಯಾರ್ಥಿನಿಯ ಮನೆಗೆ ತೆರಳಿದ ಪ.ಪೂ. ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟರಾಜು ಅವರು ವಿದ್ಯಾರ್ಥಿನಿಯಿಂದ ಪ್ರಶ್ನೆ ಪತ್ರಿಕೆ ಪಡೆದು, ವಿಚಾರಿಸಿ ಮುಂದಿನ ಕ್ರಮಕ್ಕಾಗಿ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಮಾಹಿತಿ ನೀಡಿದ್ದಾರೆ. ಪ್ರಶ್ನೆ ಪತ್ರಿಕೆಯಲ್ಲಾಗಿರುವ ಲೋಪಗಳನ್ನು ವಿದ್ಯಾರ್ಥಿನಿ ಸರಿಯಾಗಿ ಗಮನಿಸಿಲ್ಲ, ತಪ್ಪುಗಳನ್ನು ಸ್ಥಳದಲ್ಲಿದ್ದ ಮೇಲ್ವಿಚಾರಕರ ಬಳಿ ಹೇಳಿದ್ದರೆ ಕೂಡಲೇ ಪ್ರಶ್ನೆ ಪತ್ರಿಕೆ ಬದಲಿಸಬಹುದಿತ್ತು. ಕೇಳಿಯೂ ಪ್ರಶ್ನೆ ಪತ್ರಿಕೆ ಕೊಡದೇ ಹೋಗಿದ್ದಿದ್ದರೆ ಮೇಲ್ವಿಚಾರಕರ ಮೇಲೆ ಕ್ರಮಕೈಗೊಳ್ಳಬಹುದಾಗಿತ್ತು. ಇದೀಗ ಸಮಯ ಮೀರಿ ಹೋಗಿದ್ದರಿಂದ ವಿಚಾರದ ಬಗ್ಗೆ ನಿರ್ದೇಶಕÀರಿಗೆ ವರದಿ ಸಲ್ಲಿಸಿರುವದಾಗಿ ಪುಟ್ಟರಾಜು ತಿಳಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವ ಅಧಿಕಾರ ನಿರ್ದೇಶಕರಿಗಿದ್ದು, ಅವರಿಂದ ಸೂಚನೆ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವದೆಂದು ತಿಳಿಸಿದ್ದಾರೆ.