ಮದೆ, ಏ. ೨೫: ಮದೆ ಗ್ರಾಮದ ಬೆಟ್ಟತ್ತೂರು ಗ್ರಾಮದಲ್ಲಿ ಹಲವು ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿಪೂಜೆ ನಡೆಯಿತು. ಮೊದಲಿಗೆ ಬೆಟ್ಟತ್ತೂರು ಗ್ರಾಮದಲ್ಲಿ ಹೊಸದಾಗಿ ಸುಮಾರು ರೂ. ೧.೫ ಲಕ್ಷದಲ್ಲಿ ಗ್ರಾ.ಪಂ. ವತಿಯಿಂದ ನಿರ್ಮಿಸಲಾದ ಬಸ್ ತಂಗುದಾಣವನ್ನುಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆಯ ರಾಜ್ಯ ಅಧ್ಯಕ್ಷ ರವಿ ಕುಶಾಲಪ್ಪ, ಪಂಚಾಯಿತಿ ಅಧ್ಯಕ್ಷೆ ಚೆರಿಯಮನೆ ಚಂದ್ರಾವತಿ ಆನಂದ, ಸದಸ್ಯರಾದ ಕೆ.ಪಿ. ಜಾಜಿ, ಮಾಜಿ ಸದಸ್ಯರಾದ ಆನಂದ, ಕಿಮ್ಮುಡಿ ಜಗದೀಶ್ ಹಾಗೂ ಪಕ್ಷದ ಕಾರ್ಯ ಕರ್ತರ ಸಮ್ಮುಖದಲ್ಲಿ ಉದ್ಘಾಟನೆ ಗೊಳಿಸಲಾಯಿತು.
ಕೊಂಪುಳಿ ಐನ್ಮನೆ ಕುಟುಂಬಸ್ಥರಿಗೆ ರೂ. ೫ ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಲು ಭೂಮಿ ಪೂಜೆ, ರೂ. ೬ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಬಜೆಗುಂಡಿ ರಸ್ತೆ ಉದ್ಘಾಟನೆ, ಬೆಟ್ಟತ್ತೂರು ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಯ ದುರಸ್ತಿ ಕಾರ್ಯದ ಪರಿಶೀಲನೆ ಮಾಡ ಲಾಯಿತು. ಎಲ್ಲಾ ಕಾಮಗಾರಿಗಳ ಒಟ್ಟು ವೆಚ್ಚ ಅಂದಾಜು ರೂ. ೩೦ ಲಕ್ಷವಾಗಿದೆ. -ಇಬ್ರಾಹಿಂ