ಸಿದ್ದಾಪುರ, ಏ. ೨೪: ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಬಾಡಗ ಬಾಣಂಗಾಲ ಗ್ರಾಮದ ಹುಂಡಿಯಲ್ಲಿರುವ ಪ್ರಾಚೀನ ಕಾಲದ ಶ್ರೀ ಮುತ್ತಪ್ಪ ದೇವಾಲಯಕ್ಕೆ ಮಾಲ್ದಾರೆ ಗ್ರಾ.ಪಂ ಸದಸ್ಯ ನಿಯಾಜ್ ರೂ ೧೦ ಸಾವಿರವನ್ನು ಕೊಡುಗೆಯಾಗಿ ನೀಡಿದರು. ಹುಂಡಿಯಲ್ಲಿರುವ ಪ್ರಾಚೀನ ಕಾಲದ ಶ್ರೀ ಮುತ್ತಪ್ಪ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಗ್ರಾ.ಪಂ ಸದಸ್ಯ ನಿಯಾಜ್ ರೂ. ೧೦ ಸಾವಿರ ನಗದು ನೀಡಿದರು. ಈ ಸಂದರ್ಭ ಕಾಂಗ್ರೆಸ್ನ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣ, ಮಾಲ್ದಾರೆ ವಲಯ ಕಾಂಗ್ರೆಸ್ ಅಧ್ಯಕ್ಷ ಸಜೀ ಥೋಮಸ್, ಮಾಜಿ ಗ್ರಾ.ಪಂ ಸದಸ್ಯ ಉಮೇಶ್ ದೇವಾಲಯದ ಅಧ್ಯಕ್ಷ ಕರುಣಾಕರನ್ ಕಾರ್ಯದರ್ಶಿ ನಂದಾ ಇನ್ನಿತರರು ಹಾಜರಿದ್ದರು.