ಮಡಿಕೇರಿ, ಏ. ೨೩: ಹಿಂದೂ ಕ್ರಿಕೆಟ್ ಕ್ಲಬ್ ವತಿಯಿಂದ ಮ್ಯಾನ್ಸ್ ಕಾಂಪೌAಡ್ನಲ್ಲಿ ಹಿಂದೂ ಕಪ್ ಕ್ರಿಕೆಟ್ಗೆ ಇಂದು ಚಾಲನೆ ದೊರೆಯಿತು. ವಕೀಲ ಮೋಹನ್ ಕುಮಾರ್ ಉದ್ಘಾಟಿಸಿದರು. ಅತಿಥಿಗಳಾಗಿ ನಗರಸಭಾ ಸದಸ್ಯರುಗಳಾದ ಅರುಣ್ ಶೆಟ್ಟಿ, ಮಹೇಶ್ಜೈನಿ, ಉದ್ಯಮಿ ರವಿ, ದಾನಿ ಬಾಲಕೃಷ್ಣ ರೈ ಪಾಲ್ಗೊಂಡಿದ್ದರು. ಕ್ಲಬ್ನ ಅಧ್ಯಕ್ಷ ಪವನ್ ಹಾಗೂ ಸದಸ್ಯರು ಹಾಜರಿದ್ದರು. ಇಂದು ನಡೆದ ಪಂದ್ಯದಲ್ಲಿ ಶಾಂತಿನಿಕೇತನ ಯುವಕ ಸಂಘ ಹಾಗೂ ಡಿಸಿ ಮಕ್ಕಂದೂರು ತಂಡ ಸೆಮಿಫೈನಲ್ ಪ್ರವೇಶಿಸಿವೆ.