ವೀರಾಜಪೇಟೆ, ಏ. ೨೨ : ಹಿಂದೂ ಧರ್ಮದಿಂದ ಅನ್ಯ ಧರ್ಮಕ್ಕೆ ಮತಾಂತರಗೊAಡ ವೃದ್ಧೆಯೊಬ್ಬರು ನಿಧನರಾಗಿದ್ದು, ಅಂತ್ಯಕ್ರಿಯೆಯು ಅತಂತ್ರವಾದ ಘಟನೆ ವೀರಾಜಪೇಟೆ ನಗರದಲ್ಲಿ ನಡೆದಿದೆ.
ವೀರಾಜಪೇಟೆ ನಗರದ ಹೊರವಲಯಕ್ಕೆ ಹೊಂದಿಕೊAಡಿರುವ ಗಣಪತಿ ಬೀದಿ ಅಂಚಿನಲ್ಲಿರುವ ಯೂಸುಫ್ ಎಂಬವರ ತೋಟದ ಲೈನ್ ಮನೆಯಲ್ಲಿ ವಾಸವಿರುವ ಕುಟುಂಬದ ಎಲ್ಲಾ ಸದಸ್ಯರು ವರ್ಷಗಳ ಹಿಂದೆ ಹುಣಸೂರು ಡರ್ನಳ್ಳಿ ಎಂಬಲ್ಲಿ ರಾಬಾರ್ಟ್ ಎಂಬವರಿAದ ಕ್ರೆöÊಸ್ತ ಧರ್ಮಕ್ಕೆ ಮತಾಂತರಗೊAಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿ ಭಾನುವಾರ ಕುಟುಂಬದ ಎಲ್ಲಾ ಸದಸ್ಯರು ಡರ್ನಳ್ಳಿಗೆ ಪ್ರಾರ್ಥನೆಗಾಗಿ ತೆರಳುತ್ತಿದ್ದರು ಎನ್ನಲಾಗಿದೆ. ಈ ಮಧ್ಯೆ ಕುಟುಂಬದ ಹಿರಿಯ ಸದಸ್ಯೆ ವೃದ್ಧೆ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ವೃದ್ಧೆಯ ಅಂತ್ಯಕ್ರಿಯೆಗಾಗಿ ವೀರಾಜಪೇಟೆ ನಗರದ ಕ್ರೆöÊಸ್ತ ಧರ್ಮಕ್ಕೆ ಸೇರಿದ ಸ್ಮಶಾನಕ್ಕೆ ಬಂದಿದ್ದಾರೆ. ಸ್ಥಳದಲ್ಲಿ ಮತಾಂತರ ಪ್ರಕ್ರಿಯೆಗಳು ಸಂಪೂರ್ಣವಾಗಿರುವುದಿಲ್ಲ ಎಂದು ಹೇಳಿ ಅಂತ್ಯಕ್ರಿಯೆಗೆ ಅಡ್ಡಿಪಡಿಸಲಾಗಿದೆ. ನಂತರದಲ್ಲಿ ಕುಟುಂಬವು ನಗರದ ಮೀನುಪೇಟೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲು ಮುಂದಾಗಿದೆ. ವಿಷಯ ಅರಿತ ಹಿಂದೂ ಪರ ಸಂಘಟನೆಗಳ ಸದಸ್ಯರು ಸ್ಥಳಕ್ಕೆ ಆಗಮಿಸಿ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಮತಾಂತರಗೊAಡ ಕುಟುಂಬದ ಸದಸ್ಯರು ವೃದ್ಧೆಯ ಅಂತ್ಯಕ್ರಿಯೆ ಮಾಡುವುದಾಗಿ ತಿಳಿಸಿದ್ದಾರೆ. ಇದು ಹಿಂದೂ ರುಧ್ರಭೂಮಿಯಾಗಿದ್ದು ಇಲ್ಲಿ ಹಿಂದೂ ಧರ್ಮದಂತೆ ಅಂತ್ಯಕ್ರಿಯೆಗಳು ನಡೆಯುತ್ತದೆ. ಮತಾಂತರಗೊAಡಿರುವ ಯಾವುದೇ ವ್ಯಕ್ತಿಗಳನ್ನು ಇಲ್ಲಿ ಸಂಸ್ಕರಿಸಲು ಸಾಧ್ಯವಿಲ್ಲ ಎಂದು ಸಂಘಟನೆಯ ಪ್ರಮುಖರು ಹೇಳಿದ್ದಾರೆ. ಆಘಾತಗೊಂಡ ಕುಟುಂಬದ ಸದಸ್ಯರು ವೃದ್ಧೆಯ ಶವವನ್ನು ಹುಣಸೂರಿಗೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಿದರು.
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಬಿ.ಎಂ. ಕುಮಾರ್ ಅವರು ಮತಾಂತರಗೊಳ್ಳುವುದು ಆಘಾತಕಾರಿ ಬೆಳವಣಿಗೆಯಾಗಿದೆ. ಹಿಂದೂ ರುದ್ರಭೂಮಿಯನ್ನು ಹಿಂದೂ ಸಮುದಾಯವರು ಮಾತ್ರ ಬಳಸಲು ಪ್ರಯತ್ನಿಸಿ ಮತಾಂತರಗೊAಡಿರುವ ವ್ಯಕ್ತಿಗಳನ್ನು ಸಂಸ್ಕಾರ ಮಾಡುವುದು ಧರ್ಮಗ್ಲಾನಿ ಎನಿಸುತ್ತದೆ. ಇಂತಹ ಘಟನೆಗಳ ವಿರುದ್ಧ ಹಿಂದೂ ಪರ ಸಂಘಟನೆಗಳು ಧ್ವನಿ ಎತ್ತುವ ಕೆಲವರು ಆಮಿಷಗಳಿಗೆ ಬಲಿಯಾಗಿ ಮತಾಂತರಗೊAಡು ಕೊನೆ ಹಂತಕ್ಕೆ ಬಂದಾಗ ಇಂತಹ ಘಟನೆಗಳು ಎದುರಾಗುತ್ತದೆ ಎಂದು ಹೇಳಿದರು.
ಈ ಸಂದÀರ್ಭ ಹಿಂದೂ ಪರ ಸಂಘಟನೆಗಳ ಪ್ರಮುಖರಾದ ಪ್ರದೀಪ್ ರೈ, ಕೀತಿಯಂಡ ಮಂಜು, ರಂಜು ಮತ್ತು ರತ್ನಾಕರ್ (ಬೋಸ್) ಹಾಜರಿದ್ದರು.
- ಕಿಶೋರ್ ಕುಮಾರ್ ಶೆಟ್ಟಿ