ಮಡಿಕೇರಿ, ಏ.೨೩: ಭಾರತ ಸರ್ಕಾರದ ಸೂಚನೆಯಂತೆ, ‘ವಿಶ್ವ ಮಲೇರಿಯಾ ದಿನವನ್ನು ತಾ. ೨೫ ರಂದು ಆಚರಿಸಲಾಗುತ್ತದೆ. ಈ ವರ್ಷದ ವಿಶ್ವ ಮಲೇರಿಯಾ ದಿನಾಚರಣೆಯ “ನವೀನ ವಿಧಾನಗಳನ್ನು ಬಳಸೋಣ, ಮಲೇರಿಯಾ ಕಡಿಮೆ ಮಾಡಿ, ಜೀವ ಉಳಿಸೋಣ”, (ಹಾರ್‌ನೆಸ್ ಇನೋವೇಷನ್ ಟು ರೆಡ್ಯೂಸ್ ದಿ ಗ್ಲೋಬಲ್ ಮಲೇರಿಯಾ ಡೀಸೀಸ್ ಬರ್ಡನ್ ಅಂಡ್ ಸೇವ್ ಲೈವ್ಸ್) ಎಂಬ ಘೋಷಣೆಯೊಂದಿಗೆ ಆಚರಿಸಲಾಗುತ್ತದೆ.

ಎಲ್ಲಾ ಆರೋಗ್ಯ ಸಹಾಯಕರುಗಳು ಸಂಬAದಿಸಿದ ಉಪ ಕೇಂದ್ರಗಳಲ್ಲಿ ಗುಂಪು ಸಭೆಗಳನ್ನು ಏರ್ಪಡಿಸಿ ಮಲೇರಿಯಾ ನಿವಾರಣೆ ಕುರಿತು ಸಾರ್ವಜನಿಕರ ಜವಾಬ್ದಾರಿಯ ಕುರಿತು ಮಾಹಿತಿ ನೀಡಲು ಕ್ರಮವಹಿಸಲಾಗುತ್ತಿದೆ.

ಮಲೇರಿಯಾ ವಸ್ತುಸ್ಥಿತಿ: ಮಲೇರಿಯಾ ರೋಗವು ಪ್ಲಾಸ್ಮೋಡಿಯಂ ಎಂಬ ಪರಾವಲಂಬಿ ಸೂಕ್ಷಾö್ಮಣುವಿನಿಂದ ಉಂಟಾಗುತ್ತವೆ ಮತ್ತು ಸೋಂಕು ಹೊಂದಿದ ಹೆಣ್ಣು ಅನಾಫಿಲೀಸ್ ಸೊಳ್ಳೆಗಳು ಮಲೇರಿಯ ರೋಗವನ್ನು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ.

ಮಲೇರಿಯಾ ರೋಗದ ಲಕ್ಷಣಗಳು: ಸಾಮಾನ್ಯವಾಗಿ ಮಲೇರಿಯ ಮೂರು ಹಂತಗಳ ಲಕ್ಷಣಗಳನ್ನು ಹೊಂದಿದೆ. ಚಳಿಯ ಹಂತ: ಚಳಿಯ ಜೊತೆಯಲ್ಲಿ ನಡುಕ ಹಾಗೂ ತಲೆನೋವು ಇರುತ್ತದೆ. ಇದು ಸುಮಾರು ೧೫ ನಿಮಿಷದಿಂದ ಒಂದು ಗಂಟೆಯ ಸಮಯ ಇರಬಹುದು.

ಬಿಸಿಯ/ಜ್ವರದ ಹಂತ: ಜ್ವರ ತೀವ್ರವಾಗಿ ಇರುತ್ತದೆ. ವಿಪರೀತ ತಲೆನೋವು, ವಾಕರಿಕೆ, ವಾಂತಿಯಾಗುವAತೆ ಅನಿಸುತ್ತದೆ. ವಿಪರೀತ ಬಾಯಾರಿಕೆ ಅನಿಸುತ್ತದೆ. ಈ ಹಂತ ೨ ರಿಂದ ೬ ಗಂಟೆಗಳ ಕಾಲ ಇರುತ್ತದೆ.

ಬೆವರುವಿಕೆಯ ಹಂತ: ಜ್ವರ ಕಡಿಮೆಯಾಗುತ್ತದೆ ಮತ್ತು ದೇಹವಿಡೀ ವಿಪರೀತ ಬೆವರುತ್ತದೆ. ಸಾಮಾನ್ಯವಾಗಿ ರೋಗಿಗೆ ಗಾಢ ನಿದ್ರೆ ಬರುತ್ತದೆ. ಎಚ್ಚರವಾದಾಗ ಬಳಲಿ ಸುಸ್ತಾದ ಅನುಭವ ಆಗುತ್ತದೆ. ಈ ಹಂತ ೨ ರಿಂದ ೪ ಗಂಟೆಗಳ ಕಾಲ ಇರುತ್ತದೆ.

ರಕ್ತಲೇಪನ ಪರೀಕ್ಷೆಯಿಂದ ದೃಢಪಟ್ಟಾಗ ಅಂತಹ ಪ್ರಕರಣಗಳನ್ನು ಖಚಿತ ಮಲೇರಿಯಾ ಪ್ರಕರಣವೆಂದು ಪರಿಗಣಿಸಿ, ರಾಷ್ಟಿçÃಯ ಔಷಧೋಪಚಾರ ನೀತಿಯಂತೆ, ಮಲೇರಿಯಾ ರೋಗ ಪ್ರಬೇಧಕ್ಕೆ ತಕ್ಕಂತೆ, ಚಿಕಿತ್ಸೆ ನೀಡಲಾಗುವುದು.

ಮಲೇರಿಯಾ ನಿಯಂತ್ರಣ ಸಾಧಿಸಲು ವಾರ್ಷಿಕ ಪರಾವಲಂಬಿ ಸೂಚಿಯಂತೆ ಪ್ರತಿ ಒಂದು ಸಾವಿರ ಜನಸಂಖ್ಯೆಯಲ್ಲಿ ಎರಡಕ್ಕಿಂತ ಕಡಿಮೆ ಮಲೇರಿಯಾ ಪ್ರಕರಣಗಳಿರಬೇಕು ಮತ್ತು ವಾರ್ಷಿಕ ರಕ್ತಲೇಪನ ಪರೀಕ್ಷಾ ಪ್ರಮಾಣ ಶೇ.೧೦ ಕ್ಕಿಂತ ಹೆಚ್ಚಾಗಿರಬೇಕು.

ಕೊಡಗು ಜಿಲ್ಲೆಯಲ್ಲಿ ಮಲೇರಿಯಾ ಸ್ಥಿತಿ: ಮಾರ್ಚ್ ೨೦೨೧ ರಲ್ಲಿ ಕೊಡಗು ಜಿಲ್ಲೆಯಲ್ಲಿ ಒಟ್ಟು ೧೧೦೭೫೨ ಮಲೇರಿಯಾ ರಕ್ತಲೇಪನಗಳನ್ನು ಸಂಗ್ರಹ ಮಾಡಿ ಪರೀಕ್ಷಿಸಲಾಗಿದೆ. ಇದರಲ್ಲಿ ೪ ಮಲೇರಿಯಾ ಪ್ರಕರಣಗಳು ವರದಿಯಾಗಿದ್ದವು, ೪ ಪ್ರಕರಣಗಳು ಹೊರ ಜಿಲ್ಲೆ ಮತ್ತು ಹೊರ ರಾಜ್ಯದ ಪ್ರಯಾಣದ ಇತಿಹಾಸವಿರುತ್ತದೆ. ೩ ಪ್ರಕರಣಗಳು ಮಂಗಳೂರಿನಲ್ಲಿ ವಾಸವಾಗಿದ್ದ ಸಮಯದಲ್ಲಿ ಸೋಂಕಿಗೆ ಒಳಗಾಗಿದ್ದರು, ೧ ಪ್ರಕರಣ ಹೊರ ರಾಜ್ಯದವರಾಗಿದೆ. ಎಲ್ಲಾ ಪ್ರಕರಣಗಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

೨೦೨೨ ರಲ್ಲಿ ಮಾರ್ಚ್ವರೆಗೆ ಕೊಡಗು ಜಿಲ್ಲೆಯಲ್ಲಿ ಒಟ್ಟು ೩೫,೫೬೮ ಮಲೇರಿಯಾ ರಕ್ತಲೇಪನಗಳನ್ನು ಸಂಗ್ರಹ ಮಾಡಿ ಪರೀಕ್ಷಿಸಲಾಗಿದೆ. ಇದರಲ್ಲಿ ೧ ಮಲೇರಿಯಾ ಪ್ರಕರಣ ವರದಿಯಾಗಿದೆ. ೧ ಪ್ರಕರಣ ಹೊರ ಜಿಲ್ಲೆಯ ಪ್ರಯಾಣದ ಇತಿಹಾಸವಿದೆ. ಈ ಪ್ರಕರಣ ಮಂಗಳೂರಿನಲ್ಲಿ ವಾಸವಾಗಿದ್ದ ಸಮಯದಲ್ಲಿ ಸೋಂಕಿಗೆ ಒಳಗಾಗಿದ್ದರು, ವರದಿಯಾದ ೧ ಪ್ರಕರಣ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಮಲೇರಿಯಾ ನಿಯಂತ್ರಣಕ್ಕಾಗಿ ಸತತವಾಗಿ ಕೈಗೊಂಡ ಕ್ರಮಗಳು. ಜ್ವರ ಸಮೀಕ್ಷಾ ಕಾರ್ಯವನ್ನು ಬಲಪಡಿಸಿ, ರೋಗದ ತಪಾಸಣೆ, ಶೀಘ್ರಪತ್ತೆ ಮತ್ತು ಸಂಪೂರ್ಣ ಚಿಕಿತ್ಸೆ ನೀಡಲಾಗುತ್ತಿದೆ. ೨೪ ಗಂಟೆಗಳೊಳಗೆ ರಕ್ತಪರೀಕ್ಷೆ ಮಾಡಿಸಿ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ಮಲೇರಿಯಾ ನಿಯಂತ್ರಣದಲ್ಲಿ ಈ ಕ್ರಮಗಳೇ ಪ್ರಮುಖವಾಗಿದೆ.

ಮಲೇರಿಯಾ ಪ್ರಕರಣಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಔಷಧಗಳ ದಾಸ್ತಾನು ಇಡಲಾಗಿದೆ. ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ವೃದ್ಧಿಸಲು ತರಬೇತಿ ನೀಡಲಾಗುತ್ತಿದೆ. ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ಪರದೆಗಳ ಉಪಯೋಗದ ಬಗ್ಗೆ ಸಮುದಾಯಕ್ಕೆ ಪ್ರೇರೇಪಿಸಲಾಗುತ್ತಿದೆ. ಸಮುದಾಯಕ್ಕೆ ಸೂಕ್ತ ಮಾಧ್ಯಮಗಳ ಮೂಲಕ ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಆರ್.ವೆಂಕಟೇಶ್ ಅವರು ತಿಳಿಸಿದ್ದಾರೆ.