ನಾಪೋಕ್ಲು, ಏ. ೨೩: ನಾಪೋಕ್ಲು ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಾಲ್ನಾಡ್ ಪ್ಲಾಂರ್ಸ್ ರಿಕ್ರಿಯೇಶನ್ ಅಸೋಸಿಯೇಶನ್ ವತಿಯಿಂದ ನಡೆಯುತ್ತಿದ್ದ ಕೊಡವ ಕಪ್ ಹಾಕಿಯ ಫೈನಲ್ಸ್ ಪಂದ್ಯ ತಾ. ೨೪ರಂದು (ಇಂದು) ನಡೆಯಲಿದ್ದು, ಕಲಿಯಂಡ-ಕುಲ್ಲೇಟಿರ ತಂಡಗಳು ಸೆಣಸಾಟ ನಡೆಸಲಿವೆ.
ತಾ. ೨೩ರಂದು ನಡೆದ ಸೆಮಿ ಫೈನಲ್ಸ್ನ ಅರೆಯಡ ಮತ್ತು ಕಲಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಲಿಯಂಡ ತಂಡವು ಅರೆಯಡ ತಂಡವನ್ನು ೨-೦ ಗೋಲುಗಳ ಅಂತರದಿAದ ಮಣಿಸಿತು. ಕಲಿಯಂಡ ತಂಡದ ಪರ ಭರತ್ ಹಾಗೂ ಕಾರ್ಯಪ್ಪ ತಲಾ ಒಂದೊAದು ಗೋಲು ಗಳಿಸುವದರ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಕುಲ್ಲೇಟಿರ ಮತ್ತು ಅಂಜಪರವAಡ ತಂಡಗಳ ನಡುವಿನ ಪಂದ್ಯದಲ್ಲಿ ಕುಲ್ಲೇಟಿರ ತಂಡವು ಅಂಜಪರವAಡ ತಂಡವನ್ನು ೩-೧ ಗೋಲಿನಿಂದ ಪರಾಭವಗೊಳಿಸಿತು. ಅಂಜಪರವAಡ ತಂಡದ ಪರ ಬೋಪಣ್ಣ ಒಂದು ಗೋಲು ದಾಖಲಿಸಿದರೆ, ಕುಲ್ಲೇಟಿರ ತಂಡದ ಪರ ಶುಭಂ ಎರಡು ಮತ್ತು ಉತ್ತಯ್ಯ ಒಂದು ಗೋಲು ದಾಖಲಿಸುವದರ ಮೂಲಕ ತಂಡದ ಮುನ್ನಡೆಗೆ ಕಾರಣರಾದರು.
ಸೆಮಿಫೈನಲ್ ಪಂದ್ಯಾಟಕ್ಕೆ ಒಲಂಪಿಯನ್ ಮನೆಯಪಂಡ ಎಂ. ಸೋಮಯ್ಯ ಆಗಮಿಸಿ ಮಾತನಾಡಿ, ಕ್ರೀಡಾಕೂಟ ಆಯೋಜನೆ ಬಗ್ಗೆ ಶ್ಲಾಘಿಸಿದರು.
ಇಂದು ಪೂರ್ವಾಹ್ನ ೧೧.೩೦ ಗಂಟೆಗೆ ಫೈನಲ್ಸ್ ಪಂದ್ಯ ನಡೆಯಲಿದೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನಾಲ್ನಾಡ್ ಪ್ಲಾಂರ್ಸ್ ಕ್ಲಬ್ನ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಜಿ.ಬೋಪಯ್ಯ, ಎಂಎಲ್ಸಿ ಮಂಡೇಪAಡ ಸುಜಾ ಕುಶಾಲಪ್ಪ, ಎಂಎಲ್ಸಿ ವೀಣಾ ಅಚ್ಚಯ್ಯ, ಕೊಡಗು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ಪೊಲೀಸ್ ವರಿಷ್ಠಾಧಿಕಾರಿ ಮಲ್ಚಿರ ಎ.ಅಯ್ಯಪ್ಪ, ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.