*ಗೋಣಿಕೊಪ್ಪ, ಏ. ೨೨: ಗೋಣಿಕೊಪ್ಪದ ಹರಿಶ್ಚಂದ್ರಪುರದಲ್ಲಿ ಗುರುವಾರ ತಡರಾತ್ರಿಯಲ್ಲಿ ಸಂಚರಿಸುತ್ತಿದ್ದ ವಾಹನ ಹಾಯ್ದು ಕುಟ್ಟ ಗ್ರಾಮದ ನಿವಾಸಿ ಕೆ.ಆರ್. ಕರುಣ್ ಶೇಖರ್‌ವಾಡಿ (೨೯) ಮೃತಪಟ್ಟ ಘಟನೆ ನಡೆದಿದೆ.

ಕುಟ್ಟ ಪೂಚೆಕಲ್ಲು ಗ್ರಾಮದ ಕೆ.ಎಂ. ರಾಜಶೇಖರ್ ಅವರ ಪುತ್ರÀ ಕರುಣ್ ಗುರುವಾರ ಕುಟ್ಟದಿಂದ ಬೆಂಗಳೂರು ತೆರಳಲೆಂದು ಮನೆಯಿಂದ ಕಾರಿನಲ್ಲಿ ಗೋಣಿಕೊಪ್ಪ ಪಟ್ಟಣಕ್ಕೆ ಬಂದಿದ್ದಾನೆ. ತದನಂತರ ಸರ್ಕಾರಿ ಬಸ್ಸಿನಲ್ಲಿ ಬೆಂಗಳೂರಿಗೆ ಪ್ರಯಾಣಿಸಲು ಮುಂದಾಗಿದ್ದಾನೆ. ಕರುಣ್ ಬಸ್ಸಿನ ನಿರ್ವಾಹಕನೊಂದಿಗೆ ಜಗಳವಾಡಿದ್ದಾನೆ. ಈ ಕಾರಣ ನಿರ್ವಾಹಕ ಕರುಣ್‌ನನ್ನು ಹರಿಶ್ಚಂದ್ರಪುರದಲ್ಲಿ ಬಸ್ಸಿನಿಂದ ಇಳಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂದರ್ಭ ಸುಮಾರು ಮಧ್ಯರಾತ್ರಿ ೧೨ ಗಂಟೆಗೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಕೊಂದು ಡಿಕ್ಕಿಪಡಿಸಿದೆ. ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿದ್ದು, ತಲೆಯಿಂದ ಹೆಚ್ಚು ರಕ್ತ ಸ್ರಾವವಾದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತ ಪಡಿಸಿದ ವಾಹನದ ಪತ್ತೆಯಾಗದೇ ಇರುವುದರಿಂದ ವೃತ್ತ ನಿರೀಕ್ಷಕ ಜಯರಾಮ್, ಉಪನಿರೀಕ್ಷಕ ಸುಬ್ಬಯ್ಯ ಅವರು ಸಿಬ್ಬಂದಿಗಳ ತಂಡದೊAದಿಗೆ ತನಿಖೆ ನಡೆಸುತ್ತಿದ್ದಾರೆ.