ಮಡಿಕೇರಿ, ಏ. ೨೨: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾಲಯದಲ್ಲಿ ತಾ. ೨೬ ರಂದು ಅಕಾಡೆಮಿಯ “೨೮ನೇ ಸಂಸ್ಥಾಪನ ದಿನಾಚರಣೆ” ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಚಿರಿಯಪಂಡ ಎಂ. ರಾಜಾ ನಂಜಪ್ಪ, ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯದ ಅಧ್ಯಕ್ಷ ಮಂಡಚAಡ ದಿನೇಶ್ ಚಿಟ್ಟಿಯ್ಯಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಕಾಳೀಮಾಡ ಮೋಟಯ್ಯ, ಕೊರಕುಟ್ಟಿರ ಸರಚಂಗಪ್ಪ ಹಾಗೂ ಬೆಕ್ಕೆಸೊಡ್ಲೂರು ಸಮಾಜ ಸೇವಕ ಮಾಚಿಮಾಡ ರವೀಂದ್ರ ಇವರುಗಳು ಭಾಗವಹಿಸಲಿದ್ದಾರೆ.
ಶತಮಾನೋತ್ಸವದ ಸಂಚಿಕೆಯಾದ ‘ಬಾಚಮಾಡ ಡಿ.ಗಣಪತಿ ಸ್ಮರಣ ಸಂಚಿಕೆ’ ಹಾಗೂ ‘ಐಚೆಟ್ಟಿರ ಮಾ. ಮುತ್ತಣ್ಣ ಸ್ಮರಣ ಸಂಚಿಕೆ’ಯನ್ನು ಬಿಡುಗಡೆ ಮಾಡಲಾಗುವುದು. ನಂತರ ‘ಕೊಡವ ಪಡಿಪು-೧’ ಕಲಿತು ಪರೀಕ್ಷೆ ಬರೆದ ಮಕ್ಕಳಿಗೆ ಅಕಾಡೆಮಿಯ ವತಿಯಿಂದ ಪ್ರಮಾಣ ಪತ್ರವನ್ನು ವಿತರಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷರು ತಿಳಿಸಿದ್ದಾರೆ.