ಮಡಿಕೇರಿ, ಏ. ೨೨: ರಾಜಧಾನಿ ಬೆಂಗಳೂರಿನ ಯಲಹಂಕ ಹೊಸಳ್ಳಿಯಲ್ಲಿ ಬೆಂಗಳೂರು ಕೊಡವ ಸಮಾಜಕ್ಕೆ ಸರಕಾರದ ಮೂಲಕ ಇತ್ತೀಚೆಗೆ ಮಂಜೂರಾತಿಯಾಗಿರುವ ಏಳು ಎಕರೆ ಜಾಗದಲ್ಲಿ ನೂತನ ಕಾಮ ಗಾರಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ.

ಈ ಸ್ಥಳದಲ್ಲಿ ಸದ್ಯಕ್ಕೆ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಸಂಕೀರ್ಣ ನಿರ್ಮಾಣದ ಉದ್ದೇಶ ಹೊಂದಲಾಗಿದ್ದು, ನಿನ್ನೆ ಭೂಮಿ ಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ಕೊಡವ ಸಮಾಜದ ಪದಾಧಿಕಾರಿ ಗಳೊಂದಿಗೆ ಜಾಗ ಮಂಜೂರಾತಿಗೆ ಸಹಕರಿಸಿರುವ ಕೊಡಗಿನ ಶಾಸಕರು ಗಳಾದ ವೀರಾಜಪೇಟೆಯ ಕೆ.ಜಿ.ಬೋಪಯ್ಯ, ಮಡಿಕೇರಿಯ ಅಪ್ಪಚ್ಚುರಂಜನ್, ಬೆಂಗಳೂರಿನ ಎಂಎಲ್‌ಸಿ ಪುಟ್ಟಣ್ಣ ಅವರುಗಳು ಪಾಲ್ಗೊಂಡಿದ್ದರು.

ಸಮಾಜದ ಅಧ್ಯಕ್ಷ ಮುಕ್ಕಾಟಿರ ಟಿ. ನಾಣಯ್ಯ, ಗೌರವಕಾರ್ಯದರ್ಶಿ ಚಿರಿಯಪಂಡ ಸುರೇಶ್ ನಂಜಪ್ಪ ಅವರುಗಳು ಜಾಗ ಲಭ್ಯವಾಗಲು ನಡೆದ ಪ್ರಯತ್ನ ಹಾಗೂ ದೊರೆತ ಪ್ರಮುಖರ ಸಹಕಾರದ ಕುರಿತು ಸ್ಮರಿಸಿದರು. ಸಮಾಜದ ಮಾಜಿ ಅಧ್ಯಕ್ಷರುಗಳಾದ ಮಲ್ಲೇಂಗಡ ದಾದಾ ಬೆಳ್ಯಪ್ಪ, ಚೆಪ್ಪುಡೀರ ತಿಲಕ್ ಸುಬ್ಬಯ್ಯ, ಮಾಜಿ ಉಪಾಧ್ಯಕ್ಷೆ ಮೊಣ್ಣಂಡ ಸೀತಾ ಅಯ್ಯಣ್ಣ ಮತ್ತಿತರರು ಪಾಲ್ಗೊಂಡಿದ್ದರು. ಶಾಸಕರುಗಳು ಮಾತನಾಡಿ ಮುಂದೆಯೂ ಅಗತ್ಯ ಸಹಕಾರ ನೀಡುವ ಭರವಸೆಯಿತ್ತರು.

ಸಮಾಜದ ಉಪಾಧ್ಯಕ್ಷೆ ಮಲ್ಲೇಂಗಡ ಮೀರಾ ಜಲಜಕುಮಾರ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು. ಸುರೇಶ್ ನಂಜಪ್ಪ ಸ್ವಾಗತಿಸಿ, ಮೀರಾ ಜಲಜಕುಮಾರ್ ವಂದಿಸಿದರು.

(ಮೊದಲ ಪುಟದಿಂದ) ಮಳಿಗೆ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಇದರೊಂದಿಗೆ ಜನರ ಬೇಡಿಕೆಯಂತೆ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಅಮೃತ ನಿರ್ಮಲ ಯೋಜನೆಯಡಿಯಲ್ಲಿ ರೂ. ೨೦ ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಲು ಕಾರ್ಯಯೋಜನೆ ರೂಪಿಸಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ಈ ಸಂದರ್ಭ ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಪೌರಾಯುಕ್ತ ಎಸ್.ವಿ. ರಾಮದಾಸ್, ನಗರಸಭಾ ಸದಸ್ಯರಾದ ಕೆ.ಎಸ್. ರಮೇಶ್, ಎಸ್.ಸಿ. ಸತೀಶ್, ಮಂಜುಳಾ, ಚಂದ್ರು, ಸಬಿತಾ, ನಗರ ಬಿಜೆಪಿ ಅಧ್ಯಕ್ಷ ಮನು ಮಂಜುನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.