(ವಿಶೇಷ ವರದಿ : ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ಏ. ೨೨ : ನಗರದಲ್ಲಿರುವ ಕೀರೆಹೊಳೆಯಎರಡು ಬದಿಗಳು ಸರ್ಕಾರದ ಸುತ್ತೋಲೆಯಂತೆ ತಲಾ ೩೦ ಮೀಟರ್ ಅಗಲವು ಬಫರ್ ಜೋನ್ ಆಗಿರುವುದರಿಂದ ಹೊಳೆಯ ಎರಡು ಬದಿಯಲ್ಲಿ ಒತ್ತುವರಿ ಮಾಡಿ ಕೊಂಡಿರುವವರಿಗೆ ಇದೀಗ ಕಂಟಕ ಎದುರಾಗಿದಂತಾಗಿದೆ.ಗೋಣಿಕೊಪ್ಪಲುವಿನ ಕೀರೆಹೊಳೆ ಬದಿಯನ್ನು ಹಲವು ಮಂದಿ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಇದರಿಂದ ವಿಸ್ತಾರವಾಗಿ ಹರಿಯುತ್ತಿದ್ದ ಕೀರೆಹೊಳೆಯು ನಂತರ ಒತ್ತುವರಿದಾರರಿಂದಾಗಿ ಕಿರಿದಾಗಿತ್ತು. ಈ ಬಗ್ಗೆ ಸಾರ್ವಜನಿಕರು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಹೊಳೆಯ ಒತ್ತುವರಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು.

ಕಳೆದ ನಾಲ್ಕು ತಿಂಗಳ ಹಿಂದೆ ಈ ಬಗ್ಗೆ ವೀರಾಜಪೇಟೆ ತಹಶೀಲ್ದಾರ್ ಯೋಗಾನಂದ್ ಸರ್ವೆ ಕಾರ್ಯ ನಡೆಸಿ ಒತ್ತುವರಿ ಜಾಗವನ್ನು ಜೆಸಿಬಿ ಮೂಲಕ

(ಮೊದಲ ಪುಟದಿಂದ) ತೆರವುಗೊಳಿಸಲು ಮುಂದಾಗಿದ್ದರು. ಈ ವೇಳೆ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ತೆರವು ಕಾರ್ಯ ಸ್ಥಗಿತಗೊಂಡಿತ್ತು. ಇದೀಗ ಸರ್ಕಾರ ಆದೇಶ ಹೊರಡಿಸಿದ್ದು ಹೊಳೆಯ ಎರಡು ಬದಿ ಜಾಗವನ್ನು ಬಫರ್ ಜೋನಾಗಿ ಕಾದಿರಿಸಲು ತಿಳಿಸಿದೆ. ಈ ಬಗ್ಗೆ ಹೊಳೆಯ ಎರಡು ಬದಿಯಲ್ಲಿ ಬಫರ್ ಜೋನ್‌ನ ಗಡಿಯನ್ನು ಗುರುತಿಸುವಂತೆ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್‌ರವರು ಸರ್ವೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ತಹಶೀಲ್ದಾರ್ ಆದೇಶದ ಮೇರೆ ಸರ್ವೆ ಅಧಿಕಾರಿಗಳು ಗೋಣಿಕೊಪ್ಪಲುವಿನ ಕೀರೆಹೊಳೆಯ ಬದಿಯ ಸರ್ವೆ ಕಾರ್ಯವನ್ನು ಸಧ್ಯದಲ್ಲಿಯೇ ಕೈಗೆತ್ತಿಕೊಳ್ಳಲಿದ್ದು ಬಫರ್ ಜೋನ್ ಗಡಿಯನ್ನು ಗುರುತಿಸಿ ತಹಶೀಲ್ದಾರರಿಗೆ ವರದಿ ನೀಡಲಿದ್ದಾರೆ. ಇದರಿಂದಾಗಿ ಹೊಳೆ ಬದಿಯಲ್ಲಿರುವ ಹಲವು ಕಟ್ಟಡಗಳು ತೆರವುಗೊಳಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಪ್ರಶಾಂತ್ ಅಧಿಕಾರಿಗಳಿಗೆ ವರದಿ ನೀಡುವಂತೆ ನಿರ್ದೇಶನ ನೀಡಿದ್ದಾರೆ.ಸರ್ಕಾರಿ ಆದೇಶ

ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಾದ ರಿಟ್ ಅರ್ಜಿ ಸಂಖ್ಯೆ ೩೮೪೦೧/೨೦೧೪ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯವು ನೀಡಿರುವ ದಿ.೧೪.೦೭.೨೦೨೧ರ ದೈನಂದಿನ ಆದೇಶ, ಭಾರತದ ಸಂವಿಧಾನದ ಅನುಚ್ಚೇದ ಕರ್ನಾಟಕ ಕೆರೆ ಸಂರಕ್ಷಣೆ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ಕಲಂ ೧೨ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿನಿಯಮ ೨೦೨೦ ಕರ್ನಾಟಕ ಪುರಸಭೆಗಳ ಅಧಿನಿಯಮ ೧೯೬೪ ಮತ್ತು ಕರ್ನಾಟಕ ಮಹಾನಗರ ಪಾಲಿಕೆಯ ಅಧಿನಿಯಮ ೧೯೭೬ಗಳಲ್ಲಿ ಕೆರೆ, ಕಟ್ಟೆ ಮೊದಲಾದ ಅವುಗಳಲ್ಲಿನ ಅಕ್ರಮ ಕಟ್ಟಡ ಸಂರಚನೆಗಳನ್ನು ತೆರವುಗೊಳಿಸುವ ಕುರಿತು ಈ ಕೆಳಕಂಡAತೆ ಅವಕಾಶಗಳನ್ನು ಕಲ್ಪಿಸಲಾಗಿರುತ್ತದೆ. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ೨೦೧೪ರ ಕಲಂ ೧೨ರ ಉದೃತ ಭಾಗ ಈ ಕೆಳಗಿನಂತಿದೆ.

ಮೇಲ್ಕಾಣಿಸಿದ ಪ್ರಾವಿದಾನಗಳ ಅನುಸಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯು ಸೇರಿದಂತೆ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು, ನಗರಸಭೆಗಳು, ಪುರಸಭೆಗಳು ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಕೆರೆ - ಕಟ್ಟೆ ಮೊದಲಾದ ಜಲಕಾಯಗಳಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿರುವ ಕಟ್ಟಡ ಸಂರಚನೆಯನ್ನು ತೆರವುಗೊಳಿಸಿ ಜಲಕಾಯಗಳನ್ನು ಸಂರಕ್ಷಿಸಬೇಕಾಗಿರುತ್ತದೆ. ಮಾತ್ರವಲ್ಲದೆ ಕೆರೆ ಕಟ್ಟೆ ಜಲಕಾಯಗಳ ಅಂಚಿನಿAದ ೩೦ ಮೀ.ವರೆಗಿನ ನಿರ್ಬಂಧಿತ ಪ್ರದೇಶದಲ್ಲಿ ಸಹ ಯಾವುದೇ ಅಕ್ರಮ ಕಟ್ಟಡ ಸಂರಚನೆಗಳನ್ನು ತೆರವುಬೇಕಾಗಿರುತ್ತದೆ.