ನಾಪೋಕ್ಲು, ಏ. ೨೨: ಸಮೀಪದ ಕಿರುಂದಾಡು ಗ್ರಾಮದ ಭಗವತಿ ಅನ್ನಪೂರ್ಣೇಶ್ವರಿ ದೇವಾಲಯದ ವಾರ್ಷಿಕ ಉತ್ಸವ ತಾ. ೨೪ ರಂದು ನಡೆಯಲಿದೆ. ಬೆಳಿಗ್ಗೆ ದೇವರ ಬಲಿ, ಮಧ್ಯಾಹ್ನ ಪಟ್ಟಣಿ ಹಬ್ಬ, ಸಂಜೆ ಅಲಂಕಾರ ಪೂಜೆ ನಡೆಯಲಿದೆ. ತಾ/ ೨೫ ರಂದು ಭಂಡಾರ ತಕ್ಕರ ಮನೆಯಿಂದ ಭಂಡಾರ ತರುವುದು, ಬೋಡು ಉತ್ಸವ, ನಂತರ ಭಕ್ತರಿಗೆ ಅನ್ನದಾನ ನಡೆಯಲಿದೆ. ಬಳಿಕ ಬೊಳಕಾಟ್, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ದೇವರ ಜಳಕ, ಸಂಜೆ ದೇವರ ಬಲಿ ಹಾಗೂ ಅನ್ನದಾನ ನಡೆಯಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.