ಚೆಯ್ಯಂಡಾಣೆ, ಏ. ೨೨: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ನರಿಯಂದಡ, ಚೇಲವಾರ, ಕೋಕೇರಿ, ಕರಡ, ಪೊದವಾಡ ಹಾಗೂ ಅರಪಟ್ಟು ಗ್ರಾಮಗಳ ಗ್ರಾಮಸ್ಥರು ೨೦೨೧-೨೨ನೇ ಸಾಲಿನ ಮನೆ ಕಂದಾಯ, ನೀರಿನ ತೆರಿಗೆ, ಪರವಾನಗಿ ಶುಲ್ಕವನ್ನು ಪಾವತಿಸಲು ಬಾಕಿ ಇರುವವರು ಕೂಡಲೇ ಪಂಚಾಯಿತಿಗೆ ತೆರಿಗೆಯನ್ನು ಪಾವತಿಸಿ ರಶೀದಿ ಪಡೆದುಕೊಳ್ಳಬೇಕೆಂದು ಪಂಚಾಯಿತಿ ಪ್ರಕಟಣೆ ತಿಳಿಸಿದೆ.

ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಅಂಗಡಿ ಮಾಲೀಕರ ಲೈಸೆನ್ಸ್ ಅವಧಿಯು ಮಾರ್ಚ್ ೩೧ಕ್ಕೆ ಮುಕ್ತಾಯ ಗೊಂಡಿರುವುದರಿAದ ತಾ. ೩೦ ರೊಳಗಾಗಿ ತಮ್ಮ ಪರವಾನಗಿ (ಲೈಸನ್ಸ್) ಅನ್ನು ನವೀಕರಿಸಿಕೊಳ್ಳತಕ್ಕದ್ದು. ತಪ್ಪಿದಲ್ಲಿ ದಂಡ ಸಹಿತ ವಸೂಲಾತಿಗೆ ಕ್ರಮಕೈಗೊಳ್ಳಲಾಗುವುದೆಂದು ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.