ಮಡಿಕೇರಿ, ಏ. ೨೨: ಇಲ್ಲಿನ ಮಹದೇವಪೇಟೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ತಾ. ೨೩ರಂದು (ಇಂದು) ಚಂಡಿಕಾಯಾಗ ಏರ್ಪಡಿಸಲಾಗಿದೆ. ಪೊಳಲಿಯ ಸುಬ್ರಮಣ್ಯ ತಂತ್ರಿಗಳ ಸಮ್ಮುಖದಲ್ಲಿ ಯಾಗ ನಡೆಯಲಿದ್ದು, ಯಾಗ ಸೇವೆ ಮಾಡಿಸುವವರು ಬೆಳಿಗ್ಗೆ ೭ ಗಂಟೆಯಿAದ ೯.೩೦ರ ಒಳಗಡೆ ದೇವಾಲಯಕ್ಕೆ ಆಗಮಿಸಿ ಸಂಕಲ್ಪ ಮಾಡಿಸಬೇಕು. ಯಾಗದ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.