(ಕಾಯಪಂಡ ಶಶಿಸೋಮಯ್ಯ) ಮಡಿಕೇರಿ, ಏ. ೨೧ : ರಾಜ್ಯದ ಪುಟ್ಟ ಜಿಲ್ಲೆಯಾಗಿರುವ ಕೊಡಗು; ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಸರಕಾರ ಗಳಲ್ಲಿನ ಪ್ರಾತಿನಿಧ್ಯ ದಿಂದ ಸತತವಾಗಿ ವಂಚಿತ ವಾಗುತ್ತಾ ಬರುತ್ತಿರುವುದು ಕೊಡಗಿನ ದೌರ್ಭಾಗ್ಯವೇ ಸರಿ. ಕಳೆದ ಹಲವಷ್ಟು ವರ್ಷಗಳಿಂದ ಕೊಡಗಿನ ಶಾಸಕರು ಸಚಿವ (ಕಾಯಪಂಡ ಶಶಿಸೋಮಯ್ಯ)
ಮಡಿಕೇರಿ, ಏ. ೨೧ : ರಾಜ್ಯದ ಪುಟ್ಟ ಜಿಲ್ಲೆಯಾಗಿರುವ ಕೊಡಗು; ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಸರಕಾರ ಗಳಲ್ಲಿನ ಪ್ರಾತಿನಿಧ್ಯ ದಿಂದ ಸತತವಾಗಿ ವಂಚಿತ ವಾಗುತ್ತಾ ಬರುತ್ತಿರುವುದು ಕೊಡಗಿನ ದೌರ್ಭಾಗ್ಯವೇ ಸರಿ. ಕಳೆದ ಹಲವಷ್ಟು ವರ್ಷಗಳಿಂದ ಕೊಡಗಿನ ಶಾಸಕರು ಸಚಿವ ಪರಿಷತ್ ಸದಸ್ಯರಾಗಿದ್ದ ಟಿ.ಜಾನ್ ಅಲ್ಪಸಂಖ್ಯಾತ ಕೋಟಾ ಎಂಬAತೆ ಅವಕಾಶ ಪಡೆದಿದ್ದರಿಂದ ಕೊಡಗಿಗೆ ಮೂರು ಸಚಿವರ ಸ್ಥಾನ ಒಲಿದು ಬಂದಿತ್ತು.
ಇದಾದ ಬಳಿಕ ೨೦೦೪ ರ ಚುನಾವಣೆಯಲ್ಲಿ ಮಡಿಕೇರಿಯಿಂದ ಕೆ.ಜಿ. ಬೋಪಯ್ಯ, ವೀರಾಜಪೇಟೆ ಹೆಚ್.ಡಿ. ಬಸವರಾಜು ಹಾಗೂ ಸೋಮವಾರಪೇಟೆಯಿಂದ ಶಾಸಕರಾಗಿದ್ದು, ಬಿ.ಎ. ಜೀವಿಜಯ ಅವರುಗಳು ಈ ಅವಧಿಯಲ್ಲಿ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ (ಕಾಂಗ್ರೆಸ್ - ಜೆಡಿಎಸ್) ರಚನೆಗೊಂಡು ಧರಂಸಿAಗ್ ಅವರು ಮುಖ್ಯಮಂತ್ರಿಗಳಾಗಿದ್ದರು.
ಇಲ್ಲಿAದಲೇ ಕೈತಪ್ಪಿತು
ಈ ಸರಕಾರದಲ್ಲಿ ಆರಂಭದಲ್ಲಿ ಕೊಡಗಿನ ಉಸ್ತುವಾರಿಯಾಗಿದ್ದು ತನ್ವೀರ್ ಸೇಠ್ ಅವರು. ಅಲಂಗೂರು ಶ್ರೀನಿವಾಸ್ ಅವರು ನಂತರದಲ್ಲಿ ಉಸ್ತುವಾರಿ ಸಚಿವರಾಗಿದ್ದರು. ಇದೇ ಅವಧಿಯಲ್ಲಿ ರಾಜಕೀಯ ಮೇಲಾಟವೂ ನಡೆದಿದ್ದು, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ಸರಕಾರ ರಚನೆಯಾಗಿ ಹೆಚ್.ಡಿ. ಕುಮಾರಸ್ವಾಮಿ ಅವರು (ಟ್ವೆಂಟಿ - ಟ್ವೆಂಟಿ) ಆಧಾರದಂತೆ ಸಿ.ಎಂ. ಆಗಿದ್ದರು. ನಂತರದಲ್ಲಿ ಬಿಜೆಪಿಗೆ ಸಿ.ಎಂ. ಪಟ್ಟ ಸಿಗದೆ ರಾಜಕೀಯ ದೊಂಬರಾಟ ನಡೆದು ಹೋಯಿತು.
೨೦೦೮ಕ್ಕೆ ಎರಡೇ ಕ್ಷೇತ್ರ
೨೦೦೮ರ ವಿಧಾನಸಭಾ ಚುನಾವಣೆ ಸಂದರ್ಭ ಮೂರು ವಿಧಾನಸಭಾ ಕ್ಷೇತ್ರ ಹೊಂದಿದ್ದ ಕೊಡಗು ಕ್ಷೇತ್ರ ಪುನರ್ ವಿಂಗಡಣೆಯ ಪರಿಣಾಮದಿಂದ ಎರಡು ಕ್ಷೇತ್ರಕ್ಕೆ (ಮಡಿಕೇರಿ - ವೀರಾಜಪೇಟೆ) ಇಳಿಯಿತು. ಮಡಿಕೇರಿಯಿಂದ ಅಪ್ಪಚ್ಚುರಂಜನ್; ವೀರಾಜಪೇಟೆಯಿಂದ ಕೆ.ಜಿ. ಬೋಪಯ್ಯ ಶಾಸಕರಾದರು. ಈ ಅವಧಿಯಲ್ಲಿ ಅಧಿಕಾರಕ್ಕೆ ಬಂದಿದ್ದು, ಬಿಜೆಪಿ ಸರಕಾರ... ಆರಂಭದಲ್ಲಿ ಯಡಿಯೂರಪ್ಪ ಬಳಿಕ ಸದಾನಂದಗೌಡ ಹಾಗೂ ನಂತರ ಜಗದೀಶ್ ಶೆಟ್ಟರ್ ಸೇರಿದಂತೆ ರಾಜ್ಯ ಮೂವರು ಮುಖ್ಯಮಂತ್ರಿಗಳನ್ನು ಕಂಡಿತು. ಈ ಸಂದರ್ಭ ಒಂದು ರೀತಿಯ ಅದೃಷ್ಟವೆಂಬAತೆ ಕೆ.ಜಿ. ಬೋಪಯ್ಯ ಅವರು ಆರಂಭದಲ್ಲಿ ಉಪಸಭಾಧ್ಯಕ್ಷ ಬಳಿಕ ಸಭಾಧ್ಯಕ್ಷ ಸ್ಥಾನದ ಅವಕಾಶ ಪಡೆದರೆ ಕೊನೆಯ ೧೦ ತಿಂಗಳಲ್ಲಿ ಅಪ್ಪಚ್ಚುರಂಜನ್ ಅವರಿಗೆ ಸಚಿವ ಸ್ಥಾನದ ಭಾಗ್ಯ ಲಭಿಸಿತ್ತು.
ಈ ಅವಧಿಯಲ್ಲಿ ಆರಂಭದಲ್ಲಿ ಕೊಡಗಿನ ಉಸ್ತುವಾರಿಯಾಗಿದ್ದ ರಾಮಚಂದ್ರಗೌಡ ಅವರು.
(ಮೊದಲ ಪುಟದಿಂದ) ಬಳಿಕ ಕೃಷ್ಣಪಾಲೇಮಾರ್ ಸಚಿವರಾದರೆ ನಂತರ ನಿಯೋಜಿತರಾಗಿದ್ದ ಎಂ.ಪಿ. ರೇಣುಕಾಚಾರ್ಯ ಅವರು ಕೊಡಗಿಗೆ ಬಾರಲೇ ಇಲ್ಲ್ಲ. ಕೊನೆಯ ಅವಧಿಯಲ್ಲಿ ಅಪ್ಪಚ್ಚುರಂಜನ್ ಕೆಲ ತಿಂಗಳು ಮಾತ್ರ ಸಚಿವರಾದರು.
೨೦೧೩ರಲ್ಲಿ
೨೦೧೩ರ ಚುನಾವಣೆಯಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಚನೆಗೊಂಡಿತು. ಈ ಬಾರಿ ಜಿಲ್ಲೆಯಿಂದ ಶಾಸಕರಾಗಿದ್ದವರು ಬಿಜೆಪಿಯ ರಂಜನ್ ಹಾಗೂ ಬೋಪಯ್ಯ ಅವರುಗಳು. ಈ ಕಾರಣ ಎಂಬAತೆ ಮತ್ತೆ ಜಿಲ್ಲೆಗೆ ಉಸ್ತುವಾರಿಗಳಾದವರು ಬೇರೆ ಜಿಲ್ಲೆಯವರು.
ಐದು ಸಚಿವರು
ಆರಂಭದಲ್ಲಿ ಹೆಚ್.ಸಿ. ಮಹದೇವಪ್ಪ ಬಳಿಕ ಮಹದೇವ ಪ್ರಸಾದ್, ನಂತರ ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್. ಎಂ.ಆರ್. ಸೀತಾರಾಮ್ ಉಸ್ತುವಾರಿ ಸಚಿವರಾದರು. ಐದು ವರ್ಷದಲ್ಲಿ ಕೊಡಗು ಕಂಡಿದ್ದು, ಐವರು ಸಚಿವರನ್ನು.
೨೦೧೮ರ ಚುನಾವಣೆ
೨೦೧೮ರ ಚುನಾವಣೆಯಲ್ಲಿ ಜಿಲ್ಲೆಯಿಂದ ಶಾಸಕರಾಗಿದ್ದ ಮತ್ತೆ ಬಿಜೆಪಿಯ ಇಬ್ಬರು ರಾಜ್ಯದಲ್ಲಿ ಆರಂಭದಲ್ಲಿ ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರಕಾರ ರಚನೆಗೊಂಡು ಕುಮಾರಸ್ವಾಮಿ ಸಿಎಂ ಆದರೆ ಕೊಡಗಿನ ಉಸ್ತುವಾರಿಯಾಗಿದ್ದು, ಸಾ.ರಾ. ಮಹೇಶ್ ಅವರು. ಬಳಿಕ ರಾಜಕೀಯ ಕಸರತ್ತು ನಡೆದು ಬಿಜೆಪಿ ಅಧಿಕಾರ ಹಿಡಿಯಿತು.
ಯಡಿಯೂರಪ್ಪ ಮುಖ್ಯಮಂತ್ರಿಗಳಾದರೆ ಕೊಡಗಿನ ಉಸ್ತುವಾರಿಗಳು ಮಾತ್ರ ಜಿಲ್ಲೆಯ ಶಾಸಕರಿಗೆ ಸಿಗಲಿಲ್ಲ. ಅಪ್ಪಚ್ಚುರಂಜನ್ ೫ ಬಾರಿ, ಕೆ.ಜಿ. ಬೋಪಯ್ಯ ೪ ಬಾರಿ ಶಾಸಕರಾಗಿದ್ದರೂ ಸರಕಾರದಲ್ಲಿ ಪ್ರಾತಿನಿಧ್ಯ ದೊರಕಲಿಲ್ಲ. ಜಿಲ್ಲೆಯ ಉಸ್ತುವಾರಿಗಳಾಗಿದ್ದು, ಮೊದಲು ಸುರೇಶ್ಕುಮಾರ್, ಬಳಿಕ ವಿ. ಸೋಮಣ್ಣ, ಕೋಟಾ ಶ್ರೀನಿವಾಸಪೂಜಾರಿ ಹಾಗೂ ಇದೀಗ ಬಿ.ಸಿ. ನಾಗೇಶ್ ಉಸ್ತುವಾರಿಗಳಾಗಿದ್ದಾರೆ. ಈ ತನಕ ೪ ವರ್ಷದಲ್ಲಿ ಕೊಡಗು ಐವರು ಸಚಿವರನ್ನು ಕಂಡAತಾಗಿದೆ. ಕೆಲವು ತಿಂಗಳ ಹಿಂದೆ ಜಿಲ್ಲೆಯ ಇಬ್ಬರು ಶಾಸಕರ ಪರವಾಗಿ ಸಾಕಷ್ಟು ಒತ್ತಾಯಗಳು ಎದುರಾಗಿದ್ದರೂ ಫಲಿತಾಂಶ ಶೂನ್ಯವಾಗಿದೆ.
ರಾಜ್ಯ ಸಚಿವ ಸಂಪುಟದಲ್ಲಿ ಒಂದೆರಡು ಸ್ಥಾನ ಖಾಲಿ ಇವೆ. ಅಲ್ಲದೆ ಪ್ರಸ್ತುತ ಬದಲಾವಣೆಯ ಮಾತೂ ಕೇಳಿಬರುತ್ತಿದೆ. ಉಳಿದಿರುವ ಒಂದು ವರ್ಷದ ಅವಧಿಯಲ್ಲಾದರೂ ಜಿಲ್ಲೆಯ ಶಾಸಕರಾಗಿರುವ ಇಬ್ಬರ ಪೈಕಿ ಯಾರಿಗಾದರೂ ಅವಕಾಶ ಸಿಗುವದೇ ಎಂಬದು ನಿರೀಕ್ಷೆಯಷ್ಟೆ.
೧೯೯೯ಕ್ಕೂ ಮುಂಚೆ ಕೊಡಗಿನವರಾದ ಇತರ ರಾಜಕೀಯ ಪ್ರಮುಖರಾದ ಎ.ಎಂ. ಬೆಳ್ಳಿಯಪ್ಪ, ಡಿ.ಎ. ಚಿಣ್ಣಪ್ಪ, ಎಂ.ಸಿ. ನಾಣಯ್ಯ, ಬಿ.ಎ. ಜೀವಿಜಯ ಅವರುಗಳು ಸಚಿವರಾಗಿದ್ದು, ಕೊಡಗಿನ ಹಿಂದಿನ ಇತಿಹಾಸವಿದೆ. ಇದಕ್ಕೂ ಮುಂಚಿತವಾಗಿ ಆರ್. ಗುಂಡೂರಾವ್ ಅವರು ಸಚಿವರಾಗಿ ಬಳಿಕ ರಾಜ್ಯದ ಮುಖ್ಯಮಂತ್ರಿಗಳೂ ಆಗಿದ್ದರು ಎಂಬದೂ ಸ್ಮರಣೀಯ.