ವೀರಾಜಪೇಟೆ, ಏ. ೨೨: ಜೆಡಿಎಸ್‌ನ ಜನತಾ ಜಲಧಾರೆ ರಥವನ್ನು ವೀರಾಜಪೇಟೆ ತಾಲೂಕು ಜೆಡಿಎಸ್ ಘಟಕವು ಬರಮಾಡಿ ಕೊಂಡಿತು. ನಗರದ ಗಡಿಯಾರ ಕಂಬದ ಬಳಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್, ರಾಜ್ಯದಾದ್ಯಂತ ರಥ ಸಂಚರಿಸಲಿದ್ದು, ಇದರೊಂದಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಅವರು ಜನತೆಗೆ ನೀಡಿರುವ ಜನಪರ ಕಾರ್ಯಕ್ರಮಗಳ ಬಗ್ಗೆ ಜನತೆಗೆ ಅರಿವು ಮೂಡಿಸುವ ಕೆಲಸವನ್ನು ಮಾಡಿಸಲಾಗುತ್ತಿದೆ ಎಂದರು.

ಜಾತ್ಯತೀತ ಜನಾತದಳ ಪಕ್ಷದ ರಾಜ್ಯ ಹಿರಿಯ ಉಪಾಧ್ಯಕ್ಷ ಎಂ.ಎA. ಶರೀಫ್, ಜಿಲ್ಲಾ ಕಾರ್ಯಧ್ಯಕ್ಷ ಹೆಚ್.ಎಸ್. ಮತೀನ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಖ್ ಖಾನ್, ವೀರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ಪಿ.ಎ. ಮಂಜುನಾಥ್ ಇವರುಗಳು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಜಾತ್ಯತೀತ ಜನತಾದಳದ ಪ್ರಮುಖರಾದ ಪಂದ್ಯAಡ ರವಿ ಮಾದಪ್ಪ, ಸನ್ನು ಕುಶಾಲಪ್ಪ, ಬಾಳೆಕುಟ್ಟಿರ ದಿನಿ, ನಗರ ಅಧ್ಯಕ್ಷ ಯೋಗೇಶ್ ನಾಯ್ದು, ಶಂಷುದ್ದೀನ್, ಕಿಶೋರ್, ಮತ್ತಿತರರು ಇದ್ದರು.