ನಾಪೋಕ್ಲು, ಏ. ೨೨: ಸಮೀಪದ ಚೋನಕೆರೆ ನಿವಾಸಿ ಕಲ್ಲೇಂಗಡ ಕುಟ್ಟಪ್ಪ (ಕುಮಾರ-೫೬) ತನ್ನ ಮನೆಯ ಕೋಣೆಯಲ್ಲಿ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಿಗ್ಗೆ ಅವರ ಪತ್ನಿ ಶೈಲಾ ತನ್ನ ತವರು ಮನೆಯಿಂದ ಗಂಡನಿಗೆ ದೂರವಾಣಿ ಕರೆ ಮಾಡಿದಾಗ ಯಾವುದೇ ಪ್ರತಿಕ್ರೀಯೆ ಬಾರದ ಹಿನ್ನೆಲೆ ಮನೆಯವರಿಗೆ ಫೋನಾಯಿಸಿ ನೋಡುವಂತೆ ಹೇಳಿದಾಗ ತನ್ನ ಮನೆಯ ಕೋಣೆಯಲ್ಲಿ ಗುಂಡೇಟಿನಿAದ ಸತ್ತಿರುವುದು ಗೋಚರಿಸಿದೆ. ಈ ಕೃತ್ಯ ರಾತ್ರಿ ಸಮಯದಲ್ಲಿ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆತ್ಮಹತ್ಯೆಗೆ ಸಾಲ ಕಾರಣ ಎಂದು ತಿಳಿದು ಬಂದಿದೆ.

ಪತ್ನಿ ತನ್ನ ತವರು ಮನೆ ಕಾಲೂರಿಗೆ ಹಬ್ಬಕ್ಕೆ ಹೋಗಿದ್ದು ಈ ಸಂದರ್ಭ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ. ಸ್ಥಳಕ್ಕೆ ನಾಪೆೆÇÃಕ್ಲು ಠಾಣಾಧಿಕಾರಿ ಸದಾಶಿವ ಮತ್ತು ಸಿಬ್ಬಂದಿ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.