ವೀರಾಜಪೇಟೆ, ಏ. ೨೧: ಸನ್ಮಾನಗಳು ಜವಬ್ದಾರಿಯನ್ನು ಹೆಚ್ಚಿಸುತ್ತದೆ. ಸನ್ಮಾನ ಸ್ವೀಕರಿಸುವ ಮೂಲಕ ಜನರ ಆಶೋತ್ತರಗಳನ್ನು ಈಡೇರಿಸಲು ಸಹಕಾರಿಯಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಹೇಳಿದರು.

ವೀರಾಜಪೇಟೆ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಇಗ್ಗುತ್ತಪ್ಪ ಕೊಡವ ಸಂಘದ ಮಹಾ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್‌ನಲ್ಲಿ ಚರ್ಚಿಸಿದ್ದೇನೆ. ಸರ್ಕಾರದಿಂದ ಉತ್ತಮ ಸ್ಪಂದನ ದೊರೆತಿದೆ. ಮುಂದಿನ ದಿನಗಳಲ್ಲಿ ಆದ್ಯತೆ ಮೇರೆಗೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುವುದು ಎಂದು ಹೇಳಿದರು. ಸಂಘದ ಅಧ್ಯಕ್ಷ ಮಾದಂಡ ಎಸ್. ಪೂವಯ್ಯ ಮಾತ ನಾಡಿದರು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಮಂಡೇಪAಡ ವಿನಾಂಕ್ ಕುಟ್ಟಪ್ಪ ಅವರನ್ನು ಸನ್ಮಾನಿಸ ಲಾಯಿತು. ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ನೆಲ್ಲಮಕ್ಕಡ ಬೆಳ್ಳಿಯಪ್ಪ, ಪಳಂಗAಡ ಉತ್ತಪ್ಪ, ವಾಟೇರಿರ ಕಾಳಪ್ಪ, ನೆಲ್ಲಮಕ್ಕಡ ಶಾರದ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭ ನೂತನ ಸಮಿತಿಯನ್ನು ರಚಿಸ ಲಾಯಿತು. ಅಧ್ಯಕ್ಷರಾಗಿ ಪಟ್ಟಡ ಮನು ರಾಮಚಂದ್ರ, ಕಾರ್ಯದರ್ಶಿಯಾಗಿ ಚೇಂದಿರ ವಿಶ್ವನಾಥ್, ಅಚ್ಚಪಂಡ ರಾಜ ತಿಮ್ಮಯ್ಯ, ಪಟ್ಟಡ ಸಚಿನ್ ಸುಬ್ಬಯ್ಯ, ಕಬ್ಬಚ್ಚಿರ ರತ್ನ ಬೋಪಣ್ಣ, ಮಾದಂಡ ತಿಮ್ಮಯ್ಯ, ಕಂಬೆಯAಡ ಪವಿತ್ರಗೋಪಾಲ, ಮುಕ್ಕಾಟ್ಟಿರ ಸವಿತಾ ಪೊನ್ನಪ್ಪ ಆಯ್ಕೆಗೊಂಡರು.