ಮಡಿಕೇರಿ, ಏ. ೨೧: ಕೃಷಿ ಪಂಡಿತ ಮತ್ತು ರಾಷ್ಟಿçÃಯ ಜಗಜೀವನ ರಾಮ್ ಅಭಿನವ ಕೃಷಿ ಪ್ರಶಸ್ತಿ ಪುರಸ್ಕೃತ ನಲ್ಲೂರಿನ ಪ್ರಗತಿಪರ ಕೃಷಿಕ ಸೊಮೇಂಗಡ ಗಣೇಶ್ ತಿಮ್ಮಯ್ಯ ಅವರನ್ನು ಉತ್ತರಖಾಂಡದ ಮುಸ್ಸೋರಿಯಲ್ಲಿರುವ ಕೇಂದ್ರ ಸರಕಾರದ ಪ್ರತಿಷ್ಠಿತ ಲಾಲ್ ಬಹುದ್ದೂರ್ ಶಾಸ್ತಿç ಆಡಳಿತ ನಿರ್ವಹಣೆ ಸಂಸ್ಥೆಗೆ ಸಂಪನ್ಮೂಲ ವ್ಯಕ್ತಿಯಾಗಿ ಆಹ್ವಾನಿಸಲಾಗಿತ್ತು.

ಐ.ಎ.ಎಸ್. ಶಿಬಿರಾರ್ಥಿ ಗಳೊಂದಿಗೆ ಕೃಷಿ ಸಂವಾದ ಕಾರ್ಯಕ್ರಮವನ್ನು ಆಯೋಜಿಸ ಲಾಗಿತ್ತು.

ಕಾರ್ಯಕ್ರಮದಲ್ಲಿ ತಾವು ಅಳವಡಿಸಿದ ಸಮಗ್ರ ಕೃಷಿ ಪದ್ಧತಿ ಪ್ರಯೋಜನಗಳು, ಕೃಷಿಯ ಜೊತೆಗೆ ಕೈಗೊಳ್ಳಬಹುದಾದ ಉಪಕಸುಬುಗಳು (ಪಶುಪಾಲನೆ, ಜೇನುಕೃಷಿ, ಮೀನು ಕೃಷಿ, ತರಕಾರಿ ಬೆಳೆಗಳು ಇತ್ಯಾದಿ) ಆ ಮೂಲಕ ರೈತರ ಆದಾಯ ದ್ವಿಗುಣದ ಮಾರ್ಗೋಪಾಯಗಳು ಹಾಗೂ ಇತರೆ ಕೃಷಿಕರಿಗೆ ಮಾರ್ಗದರ್ಶನ ನೀಡುತ್ತಿರುವ ಬಗ್ಗೆ ಅವರು ಮಾಹಿತಿ ಹಂಚಿಕೊAಡರು.

ಜಿಲ್ಲೆಯಲ್ಲಿರುವ ಪ್ರಚಲಿತ ಕೃಷಿ ಸಮಸ್ಯೆಗಳು ಮತ್ತು ನಿವಾರಣೆಯ ಮಾರ್ಗೋಪಾಯಗಳ ಬಗ್ಗೆ ವಿಸ್ತçತವಾಗಿ ಚರ್ಚಿಸಲಾಯಿತು. ಮಾಜಿ ಯೋಧರೂ ಆಗಿರುವ ಇವರು, ಯಾವುದೇ ಭಾಷಾಂತರಕಾರರ ಸಹಾಯವಿಲ್ಲದೆ ಹಿಂದಿ ಭಾಷೆಯಲ್ಲಿ ತರಬೇತಿನಿರತ ಐಎಎಸ್ ಅಧಿಕಾರಿ ಗಳೊಂದಿಗೆ ಸಂವಾದ ನಡೆಸಿದ್ದು ವಿಶೇಷವಾಗಿತ್ತು.

ಕೃಷಿ ವಿಜ್ಞಾನ ಕೇಂದ್ರದ ಪ್ರಭಾಕರ್ ಮತ್ತು ಡಾ. ಸಾಜು ಜಾರ್ಜ್, ಮುಖ್ಯಸ್ಥರು ಹಾಗೂ ಡಾ. ಸಿ.ಜಿ. ಕುಶಾಲಪ್ಪ, ಡೀನ್, ಅರಣ್ಯ ಕಾಲೇಜು ಪೊನ್ನಂಪೇಟೆ ಹಾಗೂ ಅರಣ್ಯ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಆರ್.ಎನ್. ಕೆಂಚರೆಡ್ಡಿ ಅವರು ಇವರಿಗೆ ತಾಂತ್ರಿಕ ಸಹಕಾರವನ್ನು ನೀಡಿದ್ದರು. ಕಾರ್ಯಕ್ರಮದಲ್ಲಿ ಚಂದನ್ ಕೌಶಲ್, ಐ.ಎ.ಎಸ್, ಸಂಸ್ಥೆಯ ನಿರ್ದೇಶಕರು, ಯತೀಶ್, ಕರ್ನಾಟಕದ ಐ.ಎ.ಎಸ್ ಶಿಬಿರಾರ್ಥಿ, ಅಭಿರಾಮ್, ಐ.ಎ.ಎಸ್. ಅಧಿಕಾರಿ ಉಪಸ್ಥಿತರಿದ್ದರು.