ಸೋಮವಾರಪೇಟೆ, ಏ. ೨೧: ಬೆಳೆಗಾರರಿಗೆ ನಕಲಿ ಸಾವಯವ ಗೊಬ್ಬರ ವಿತರಿಸುವ ಜಾಲ ಕೊಡಗಿನಲ್ಲಿ ಕಂಡುಬAದಿದ್ದು, ಈ ಬಗ್ಗೆ ಕೃಷಿ ಇಲಾಖಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಸಂಚಾಲಕ ಕೆ.ಎಂ. ಲಕ್ಷö್ಮಣ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿರುವ ಅವರು, ಈ ಹಿಂದಿ ನಿಂದಲೂ ಕೊಡಗಿನ ರೈತರು ಹಾಗೂ ಕೃಷಿಕರನ್ನು ಗೊಬ್ಬರ, ಕ್ರಿಮಿನಾಶಕದ ಹೆಸರಿನಲ್ಲಿ ವಂಚಿಸಿರುವ ಘಟನೆಗಳು ನಡೆದಿವೆ. ಇದೀಗ ಮತ್ತೊಮ್ಮೆ ಉತ್ತಮ ಗುಣಮಟ್ಟದ ಸಾವಯವ ಗೊಬ್ಬರದ ಹೆಸರಿನಲ್ಲಿ ಕೆಲ ಕಂಪೆನಿಗಳು ರೈತರನ್ನು ವಂಚಿಸಲು ಮುಂದಾಗಿವೆ ಎಂದು ಆರೋಪಿಸಿದ್ದಾರೆ.

ಕಾಫಿ ಹಾಗೂ ಕರಿಮೆಣಸು ಬೆಲೆ ಏರಿಕೆಯಾಗುತ್ತಿದ್ದಂತೆ ಮತ್ತೆ ಸಾವ ಯವ ಬೆಳೆಯ ಕಾಫಿ, ಕಾಳುಮೆಣಸು,ಭತ್ತ, ಕಬ್ಬು, ಜೋಳ ಸೇರಿದಂತೆ ಇನ್ನಿತರ ಬೆಳೆಗಳ ಸುಂದರ ಚಿತ್ರಗಳನ್ನು ಬ್ರೋಚರ್‌ಗಳಲ್ಲಿ ಮುದ್ರಿಸಿ, ಸ್ಥಳೀಯ ಕೆಲ ಶ್ರೀಮಂತ ಹಾಗೂ ಪ್ರಗತಿಪರ ಬೆಳೆಗಾರರ ಹೆಸರನ್ನು ಹೇಳಿಕೊಂಡು ೭೫೦ ರಿಂದ ೧೦೦೦ ರೂ.ಗೆ ಒಂದು ಚೀಲದಂತೆ ಗೊಬ್ಬರ ವಿತರಿಸುವ ಮೂಲಕ ರೈತರನ್ನು ವಂಚಿಸಲಾಗು ತ್ತಿದೆ. ಈ ಬಗ್ಗೆ ಕೃಷಿ ಇಲಾಖೆ ಯಿಂದ ಗಮನಹರಿಸಿ ಬಡ ರೈತರಿಗೆ ಆಗುತ್ತಿರುವ ಮೋಸವನ್ನು ತಡೆಯ ಬೇಕಾಗಿ ಲಕ್ಷö್ಮಣ್ ಅವರು ಮನವಿ ಮಾಡಿದ್ದಾರೆ.