ಮಡಿಕೇರಿ, ಏ. ೨೧: ಮಡಿಕೇರಿಯ ಶ್ರೀ ಮುತ್ತಪ್ಪ ಕೇರಿ ಕೊಡವ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷ ಕೂಟ ಕಾರ್ಯಕ್ರಮ ನಿನ್ನೆ ಕೊಡವ ಸಮಾಜದ ಸಭಾಂಗಣದಲ್ಲಿ ಜರುಗಿತು. ಸಂಘದ ಅಧ್ಯಕ್ಷ ಶಾಂತೆಯAಡ ಸನ್ನಿ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ವಿವಿಧ ಮನರಂಜನಾ ಕ್ರೀಡಾ ಸ್ಪರ್ಧೆಗಳೊಂದಿಗೆ ಸಂಘದ ಕಾರ್ಯಚಟುವಟಿಕೆ, ಕಾರ್ಯ ಯೋಜನೆಗಳ ಕುರಿತಾಗಿ ಸಮಾಲೋಚಿಸಲಾಯಿತು. ಸನ್ನಿಪೂವಯ್ಯ ಅವರು ಮಾತನಾಡಿ, ಪ್ರಸ್ತುತ ಯುವ ಜನಾಂಗದವರು ಕಾರಣಾಂತರಗಳಿAದ ಹೊರಗೆ ನೆಲೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ಅತಂತ್ರತೆ ಎದುರಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿ, ಇಂತಹ ಹಿರಿಯ ಜೀವಗಳಿಗೆ ನೆರವಾಗುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕಾಗಿದೆ ಎಂಬ ಇಂಗಿತ ವ್ಯಕ್ತಪಡಿಸಿ ಸಹಕಾರ ಕೋರಿದರು. ಕನ್ನಂಡ ಕವಿತಾ ಬೊಳ್ಳಪ್ಪ ಪ್ರಾರ್ಥಿಸಿ, ಸನ್ನಿ ಪೂವಯ್ಯ ಸ್ವಾಗತಿಸಿದರು. ಕನ್ನಂಡ ಬೊಳ್ಳಪ್ಪ ಕಳೆದ ಸಭೆಯ ವರದಿ ಹಾಗೂ ಯತೀಶ್ ಬೋಪಯ್ಯ ಆಡಳಿತ ಮಂಡಳಿ ವರದಿ ನೀಡಿದರು. ಮುಂಡAಡ ಗಾಂಧಿ ಲೆಕ್ಕಪತ್ರ ಮಂಡಿಸಿದರು. ಕಂಡ್ರತAಡ ಮುತ್ತು ದೇವಯ್ಯ ವಂದಿಸಿದರು.

ಮನರAಜನಾ ಕ್ರೀಡೆಗಳು, ವಾಲಗತಾಟ್ ಸ್ಪರ್ಧೆ ಬಳಿಕ ರಾಷ್ಟçಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.