ಪಾಲಿಬೆಟ್ಟ, ಏ. ೨೧: ಪಾಲಿಬೆಟ್ಟ ಗ್ರಾಮದ ದಯಾನಂದ (ಜಾನಿ) ಎಂಬಾತನ ವಿವಾಹ ಹುಣಸೂರಿನಲ್ಲಿ ನಡೆದಿತ್ತು. ಮದುವೆಗೆ ಪಾಲಿಬೆಟ್ಟ ಗ್ರಾಮದ ಹಲವರು ಭಾಗವಹಿಸಿದ್ದರು. ಮದುವೆ ಕಾರ್ಯ ಮುಗಿಸಿ ತಮ್ಮ ವಾಹನದಲ್ಲಿ ಊರಿನತ್ತ ಹೊರಟಿದ್ದರು. ಹುಣಸೂರು ಬಿಟ್ಟು ಸಮೀಪದ ಅರಸು ಕಲ್ಲಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನ ನಜ್ಜುಗುಜ್ಜು ಆಗುವುದರೊಂದಿಗೆ ಕ್ಷಣಾರ್ಧದಲ್ಲೇ ವಾಹನದಲ್ಲಿದ ೯ ಮಂದಿ ಪೈಕಿ ೬ ಮಂದಿ ಸ್ಥಳದಲ್ಲಿಯೇ ಧಾರುಣವಾಗಿ ಮೃತಪಟ್ಟಿದ್ದಾರೆ.
ಮೂವರು ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಸ್ಥಳೀಯರ ನೆರವಿನಿಂದ ಹುಣಸೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮದುಮಗ ಜಾನಿಯ ತಂದೆ ಪಿಲಿಫ್ (೬೫) ಮೃತಪಟ್ಟಿದ್ದಾರೆ.
ಇಬ್ಬರು ಮಕ್ಕಳು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕ ರಾತ್ರಿ ಪಾಲಿಬೆಟ್ಟ ಗ್ರಾಮಕ್ಕೆ ಮೃತದೇಹಗಳನ್ನು ತಂದು ಮಹಿಳಾ ಸಮಾಜದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಧಾರ್ಮಿಕ ವಿಧಿ ಕಾರ್ಯಗಳಿಗಾಗಿ ಅವರವರ ಮನೆಗಳಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು.
ಜಿಲ್ಲೆ ಸೇರಿದಂತೆ ಇತರ ರಾಜ್ಯಗಳಿಂದ ಸಂಬAಧಿಕರು ಹಾಗೂ ಸ್ನೇಹಿತರು ಪಾಲಿಬೆಟ್ಟಕ್ಕೆ ಆಗಮಿಸಿ ಕಂಬನಿ ಮಿಡಿದರು.
ಬೆಳಿಗ್ಗೆ ಅಂತಿಮ ದರ್ಶನದ ನಂತರ ಸಾಮೂಹಿಕವಾಗಿ ಅಂತ್ಯ ಸಂಸ್ಕಾರ ಮಾಡಲಾಯಿತು. ಆಟೋ, ಟ್ಯಾಕ್ಸಿ ಚಾಲಕರು ಸಂಚಾರ ಸ್ಥಗಿತಗೊಳಿಸಿದ್ದರು.
ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಶೋಕಾಚರಣೆ ಮಾಡಿದರು.
ಸ್ನೇಹಿತರು, ಅಭಿಮಾನಿಗಳು, ಸಂಬAಧಿಕರು, ಗ್ರಾಮದವರು, ಜನಪ್ರತಿನಿಧಿಗಳು ಅಂತ್ಯಸAಸ್ಕಾರದಲ್ಲಿ ಪಾಲ್ಗೊಂಡಿದ್ದರು.
೫ ಮೃತದೇಹಗಳನ್ನು ಹಿಂದೂ ರುದ್ರಭೂಮಿಯಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಸAಸ್ಕಾರ ಮಾಡಲಾಯಿತು.
ಪಿಲಿಫ್ (೬೫) ಅವರ ಅಂತ್ಯಕ್ರಿಯೆ ಕ್ರಿಶ್ಚಿಯನ್ ಧಾರ್ಮಿಕ ವಿಧಾನಗಳೊಂದಿಗೆ ಚರ್ಚ್ನಲ್ಲಿ ನಡೆಯಿತು.
ಅನಿಲ್ (೪೪) ಗುತ್ತಿಗೆದಾರ ರಾಗಿದ್ದು, ಇವರ ಮಗ ವಿದೇಶದಲ್ಲಿದ್ದು, ತಾ. ೨೨ರಂದು (ಇಂದು) ಗ್ರಾಮಕ್ಕೆ ಬರುವ ಕಾರಣದಿಂದ ಅಂತ್ಯಸAಸ್ಕಾರ ನೆರವೇರಲಿದೆ.
ಎಂಎಲ್ಸಿ ಸುಜಾ ಕುಶಾಲಪ್ಪ ಮೃತರ ಕುಟುಂಬದ ಮನೆಗಳಿಗೆ ತೆರಳಿ ಸಾಂತ್ವನ ಹೇಳಿ ಕಂಬನಿ ಮಿಡಿದಿದ್ದಾರೆ. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿಜು ಸುಬ್ರಮಣಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಜಿತ್ ಕರುಂಬಯ್ಯ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಾಳೆಟಿರ ಪವಿತ್ರ ಸೇರಿದಂತೆ ಮತ್ತಿತರರು ಇದ್ದರು.
-ವರದಿ ಪುತ್ತಂ ಪ್ರದೀಪ್