ಮಡಿಕೇರಿ, ಏ.೨೧; ಯಾವದೇ ಕ್ರೀಡೆ ಆಗಿರಲಿ ಕ್ರೀಡಾಪಟುಗಳಲ್ಲಿ ಪ್ರಮುಖವಾಗಿ ಶಿಸ್ತು, ಸಮರ್ಪಣಾ ಮನೋಭಾವ ಹಾಗೂ ನಿರ್ಣಯಾತ್ಮಕ ಗುಣಗಳಿರಬೇಕೆಂದು ಮಾಜಿ ಒಲಂಪಿಯನ್ ಮನೆಯಪಂಡ ಸೋಮಯ್ಯ ಕರೆ ನೀಡಿದರು.

ವಾಂಡರ‍್ಸ್ ಕ್ಲಬ್ ವತಿಯಿಂದ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ದಿ. ಸಿ.ವಿ.ಶಂಕರ್ ಸ್ಮರಣಾರ್ಥ ನಡೆಯುತ್ತಿರುವ ಉಚಿತ ಬೇಸಿಗೆ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಶಿಬಿರಾರ್ಥಿಗಳಿಗೆ ಹಿತವಚನ ನುಡಿದರು. ಕ್ರೀಡಾಪಟುಗಳು ಎಂದಿಗೂ ಮೂರು ‘ಡಿ’ಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾವದೇ ಕ್ರೀಡೆಯಲ್ಲಾಗಲೀ ಸಾಧನೆ ಮಾಡುವದರೊಂದಿಗೆ ರಾಜ್ಯ, ರಾಷ್ಟç, ಅಂತಾರಾಷ್ಟಿçÃಯ ಮಟ್ಟದ ಕ್ರಿಡಾಪಟುಗಳಾಗಿ ಹೊರ ಹೊಮ್ಮುವಂತೆ ಕಿವಿಮಾತು ಹೇಳಿದರು. ನಗರ, ಪಟ್ಟಣ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚಿನ ಪ್ರತಿಭೆಗಳಿದ್ದು, ಅಂತರರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆಂದು ಉದಾಹರಣೆ ಸಹಿತ ಮನದಟ್ಟು ಮಾಡಿದರು. ತಾನೂ ಕೂಡ ಇದೇ ಜಿಲ್ಲಾ ಕ್ರಿಡಾಂಗಣದಲ್ಲಿ ಆಟವಾಡಿದ್ದನ್ನು ಮಕ್ಕಳಿಗೆ ನೆನಪಿಸಿದರು.

ಈ ಸಂದರ್ಭ ವಾಡರ‍್ಸ್ ಕಾರ್ಯದರ್ಶಿ ಬಾಬು ಸೋಮಯ್ಯ, ತರಬೇತುದಾರರಾದ ಕೋಟೇರ ಮುದ್ದಯ್ಯ, ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್, ಬೊಪ್ಪಂಡ ಶಾಂ ಪೂಣಚ್ಚ, ಗಣೇಶ್, ಕುಡೆಕಲ್ ಸಂತೋಷ್, ಲೋಕೇಶ್ ಇದ್ದರು.