ಮಡಿಕೇರಿ, ಏ. ೨೧: ದಕ್ಷಿಣ ಕನ್ನಡ ಬ್ಯಾಡ್‌ಮಿಂಟನ್ ಸಂಘದ ನೂತನ ಅಧ್ಯಕ್ಷರಾಗಿ ಅಂರ‍್ರಾಷ್ಟಿçÃಯ ಬ್ಯಾಡ್‌ಮಿಂಟನ್ ಆಟಗಾರ ಮೂಲತಃ ಜಿಲ್ಲೆಯವರಾದ ಮಲೆಯಂಡ ಅಶೋಕ್ ಪೂವಯ್ಯ ಅವರು ಆಯ್ಕೆಯಾಗಿದ್ದಾರೆ.
೧೯೮೪ನೇ ಇಸವಿಯಲ್ಲಿಯೇ ಕರ್ನಾಟಕ ರಾಜ್ಯದ ಬ್ಯಾಡ್‌ಮಿಂಟನ್ ಚಾಂಪಿಯನ್ ಪಟ್ಟ ಪಡೆದುಕೊಂಡ ಇವರು, ಡಲ್ಲಾಸ್ ಓಪನ್ (ಯು.ಎಸ್.ಎ.), ಯು.ಎ.ಇ. ಓಪನ್ ಹಾಗೂ ಕುವೈತ್ ಓಪನ್ ಬ್ಯಾಡ್‌ಮಿಂಟನ್ ಪಂದ್ಯಾವಳಿಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ಕರ್ನಾಟಕ ಓಪನ್ ಬ್ಯಾಡ್‌ಮಿಂಟನ್ ಟೂರ್ನಿಗಳಲ್ಲಿ ಸಹೋದರ ಅರುಣ್ ಪೂವಯ್ಯ ಅವರೊಂದಿಗೆ ಡಬಲ್ಸ್ ವಿಭಾಗದಲ್ಲಿ ಒಡಗೂಡಿ ಹಲವು ಟೂರ್ನಿಗಳ ವಿಜೇತರಾಗಿದ್ದಾರೆ ಅಲ್ಲದೆ, ಭಾರತ ಎನ್.ಎಂ.ಪಿ.ಟಿ. ಟೂರ್ನಿಗಳಲ್ಲಿ ಸತತ ೧೫ ವರ್ಷಗಳ ಕಾಲ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ವಿಜೇತರಾಗಿರುವ ಹಿರಿಮೆ ಇವರಿಗೆ ದೊರಕುತ್ತದೆ. ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿರುವ ಇವರು ಬ್ಯಾಡ್‌ಮಿಂಟನ್ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.