ಅಂಬೇಡ್ಕರ್ ಜನ್ಮ ದಿನಾಚರಣೆ

ಸುಂಟಿಕೊಪ್ಪ, ಏ. ೨೧: ಸಂವಿಧಾನ ಶಿಲ್ಪ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೧ನೇ ಜನ್ಮದಿನಾಚರಣೆಯನ್ನು ಪ್ರಜಾ ಪರಿವರ್ತನಾ ವೇದಿಕೆಯ ವತಿಯಿಂದ ಜಿಲ್ಲಾ ಕಚೇರಿಯಲ್ಲಿ ಆಚರಿಸಲಾಯಿತು.

ಸರಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಹೆಚ್.ಎಸ್. ಮುತ್ತಪ್ಪ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತದ ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ದೇಶಕ್ಕೆ ಸಂವಿಧಾನವನ್ನು ರಚಿಸಿ ಬಡವ ಶೋಷಿತ ವರ್ಗದವರ ಏಳಿಗೆಗಾಗಿ ಶ್ರಮಿಸಿದ ಮಹಾನುಬಾವರು ವಿಶ್ವ ನಾಯಕನಾಗಿ ಮೂಡಿಬಂದಿದ್ದಾರೆ. ಅವರ ಜನ್ಮ ದಿನಾವರಣೆಯನ್ನು ಪ್ರಪಂಚದಾದ್ಯAತ ಹಲವಾರು ರಾಷ್ಟçಗಳಲ್ಲಿ ಆಚರಣೆ ಮಾಡುವ ಮೂಲಕ ಭಾರತದ ಕೀರ್ತಿಯನ್ನು ಮೇಲ್ಮಟ್ಟಕ್ಕೆ ಕೊಂಡೊಯ್ದಿದೆ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಎಲ್ಲರೂ ಪಾಲಿಸುವಂತಾಗ ಬೇಕೆಂದರು. ಈ ಸಂದರ್ಭ ಪ್ರಜಾ ಪರಿವರ್ತನಾ ವೇದಿಕೆಯ ಉಪಾಧ್ಯಕ್ಷ ಫಿರೋಜ್ ಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎ. ಗಣೇಶ್, ಕಾರ್ಯದರ್ಶಿ ಹೊನ್ನಪ್ಪ, ತಾಲೂಕು ಅಧ್ಯಕ್ಷೆ ಶೋಭಾ, ಖಜಾಂಚಿ ರಾಮ್ ಜಿ, ಕಾರ್ಯದರ್ಶಿ ಯಶೋದ, ಉಪಸ್ಥಿತರಿದ್ದರು.