ಸೋಮವಾರಪೇಟೆ ಕೆಇಬಿ ರಸ್ತೆ ನಿವಾಸಿ ಕರ್ನಲ್ ಟಿ.ಕೆ. ಅಣ್ಣಯ್ಯ (೮೩) ಅವರು ತಾ. ೨೧ ರಂದು ನಿಧನರಾದರು. ಅಂತ್ಯಕ್ರಿಯೆ ಸೋಮವಾರಪೇಟೆ ಟೌನ್ ಸ್ವಗೃಹದಲ್ಲಿ ತಾ. ೨೨ ರಂದು (ಇಂದು) ನಡೆಯಲಿದೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
*ಕುಶಾಲನಗರ ತಾಲೂಕಿನ ತೊರೆನೂರು ಗ್ರಾಮದವರಾಗಿದ್ದು, ಮೈಸೂರಿನಲ್ಲಿ ನೆಲೆಸಿರುವ ಕೆ.ಆರ್.ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ. ಟಿ.ಎಂ. ದೇವರಾಜು ಅವರ ಪತ್ನಿ ಪ್ರೇಮಲತಾ (೪೯) ಅವರು ತಾ. ೨೧ ರಂದು ಮೈಸೂರಿನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರ ಅಂತ್ಯ ಸಂಸ್ಕಾರ ತಾ. ೨೨ ರಂದು (ಇಂದು) ಮಧ್ಯಾಹ್ನ ತೊರೆನೂರು ಗ್ರಾಮದಲ್ಲಿ ನಡೆಯಲಿದೆ. ಮೃತರು ಪತಿ ಡಾ. ದೇವರಾಜ್, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.