ಶನಿವಾರಸಂತೆ, ಏ. ೨೧: ಪಟ್ಟಣದ ಶ್ರೀ ಚಾಮುಂಡೇಶ್ವರಿ ಬನದಲ್ಲಿ ಚಾಮುಂಡೇಶ್ವರಿ ದೇವಿ ಹಾಗೂ ಗುಳಿಗ ದೈವದ ವಾರ್ಷಿಕೋತ್ಸವ ವಿಶೇಷ ಪೂಜಾ ಕಾರ್ಯಕ್ರಮದೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು.
ತಲಪಾಡಿಯ ಪ್ರಧಾನ ಅರ್ಚಕ ಟಿ. ಗಣೇಶ್ ಭಟ್ ಹಾಗೂ ತಂಡದ ನೇತೃತ್ವದಲ್ಲಿ ಗಣಹೋಮ, ದುರ್ಗಾ ಹೋಮ, ಕುಂಭಕಲಶ ವಿಧಿವಿಧಾನಗಳ ಸಹಿತ ಸಾಂಪ್ರದಾಯಿಕವಾಗಿ ಜರುಗಿದವು. ಭಕ್ತರಿಗೆ ಪ್ರಸಾದ ವಿನಿಯೋಗವಾಗಿ ಅನ್ನಸಂತರ್ಪಣೆ ನಡೆಯಿತು.
ಕೋಟಿಪೂಜಾರಿ ಕುಟುಂಬದ ರಾಜೇಶ್ ಕೋಟ್ಯಾನ್ ವಿಧಿವಿಧಾನಗಳೊಂದಿಗೆ ಸಾಂಪ್ರದಾಯಿಕ ಬಲಿಪೂಜೆ ನೆರವೇರಿಸಿದರು. ಪಟ್ಟಣದ ನೂರಾರು ಭಕ್ತರು ಪಾಲ್ಗೊಂಡಿದ್ದು, ಅನ್ನಸಂತರ್ಪಣೆಯೊAದಿಗೆ ವಾರ್ಷಿಕೋತ್ಸವ ಸಂಪನ್ನವಾಯಿತು. ನರೇಶ್ಚಂದ್ರ, ವಿನಯ್, ಪ್ರಕಾಶ್ಚಂದ್ರ, ಶಿವಾನಂದ್ ಹಾಗೂ ಕೋಟಿಪೂಜಾರಿ ಕುಟುಂಬ ಸದಸ್ಯರು ಹಾಜರಿದ್ದರು.